ನ.19ರಂದು ಜೀವಜಾಲ ಮತ್ತು ಜೇನು ಕೃಷಿ ಕುರಿತು ವಿಚಾರ  ಸಂಕಿರಣ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೃಷಿ ತಂತ್ರಜ್ಞರ ಸಂಸ್ಥೆ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಇದೇ .19ರಂದು ಬೆಳಿಗ್ಗೆ 10ಕ್ಕೆ ನಗರದ ಎಪಿಎಂಸಿ ಆವರಣದ ಬ್ಲಾಕ್ ಹಮಾಲರ ಕ್ವಾಟರ್ಸ್ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ವಿಚಾರ ಸಂಕಿರಣ ಏರ್ಪಡಿಸಲಾಗಿದೆ.

ವಿಚಾರ ಸಂಕಿರಣದಲ್ಲಿ ಬೆಂಗಳೂರು ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಹಾಗೂ ಹೆಸರಾಂತ ವಿಜ್ಞಾನಿ ಡಾ. ಕೆ.ಎಸ್ ಗಣೇಶಯ್ಯ ಅವರು ಜೀವಜಾಲದ ಸ್ಥಿರತೆ ಕಾಪಾಡುವ ಅಗೋಚರ ಕೊಂಡಿಗಳು ಮತ್ತು

ಡಾ ವಿ.ವಿ.ಬೆಳವಾಡಿ ಅವರು ಪರಾಗಸ್ಪರ್ಶಕ್ಕಾಗಿ ಜೇನು ನೊಣಗಳ ಸಂರಕ್ಷಣೆ ಎಂಬ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕೃಷಿ ತಂತ್ರಜ್ಞರ ಸಂಸ್ಥೆಯ ಕಾರ್ಯದರ್ಶಿ ಜಿ.ಟಿ ವೀರಭದ್ರ ರೆಡ್ಡಿ ಕೋರಿದ್ದಾರೆ.

 

- Advertisement -  - Advertisement -  - Advertisement - 
Share This Article
error: Content is protected !!
";