ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ಬೆಂಗಳೂರು ರಸ್ತೆಯಲ್ಲಿರುವ ಈದ್ಗಾ ಮೈದಾನದ ಪ್ರಾರ್ಥನಾ ಸ್ಥಳಕ್ಕೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅನುದಾನದಲ್ಲಿ ೪೦ ಲಕ್ಷ ವೆಚ್ಚದಲ್ಲಿ ಸ್ಲಾಬ್ ನಿರ್ಮಾಣ ಕಾಮಗಾರಿ ಕಳೆದ ಜ.೨೨ರಿಂದ ಆರಂಭವಾಗಿದ್ದು ಕಾಮಗಾರಿಯ ಪ್ರತಿಯನ್ನು ಶಾಸಕ ಟಿ.ರಘುಮೂರ್ತಿ ವೀಕ್ಷಿಸಿ ನಿರ್ದೇಶನ ನೀಡಿದರು.
ಅವರು, ಕಾಮಗಾರಿಯ ಪ್ರಗತಿಯನ್ನು ಅವಲೋಕಿಸಿ ಮುಸ್ಲಿಂ ಸಮುದಾಯದ ಮುಖಂಡರಿಗೆ ಬಹಳ ವರ್ಷಗಳ ಬೇಡಿಕೆಯನ್ನು ಈಡೇರಿಸಲಾಗುತ್ತಿದೆ. ಕಾಮಗಾರಿ ನಿರ್ಮಾಣಕ್ಕೆ ಅಗತ್ಯವಿರುವ ಹಣವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಸಮುದಾಯದ ಮುಖಂಡರು ಆಗಮಿಸಿ ಗುಣಮಟ್ಟದ ಕಾಮಗಾರಿಯ ಬಗ್ಗೆ ಪರಿಶೀಲನೆ ನಡೆಸಬೇಕು ಎಂದರು.
ಸಮುದಾಯದ ಮುಖಂಡರಾದ ಅನ್ವರ್‌ಮಾಸ್ಟರ್, ಅತಿಕೂರ್‌ರೆಹಮಾನ್, ಎಸ್.ಎಚ್.ಸೈಯದ್, ಬಿ.ಫರೀದ್‌ಖಾನ್, ಕೆ.ದಾದಾಪೀರ್ ಮುಂತಾದರು ಶಾಸಕರಿಗೆ ಮನವಿ ಮಾಡಿ, ಸ್ಲಾಬ್ ನಿರ್ಮಾಣದ ಕಾಮಗಾರಿ ಮುಗಿಯುವ ಹಂತದಲ್ಲಿದ್ದು, ಸುತ್ತಲು ಸಿಮೆಂಟ್ ಬೆಂಚ್‌ಗಳನ್ನು ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದು, ಶಾಸಕರು ಪರಿಶೀಲಿಸುವಭರವಸೆ ನೀಡಿದರು.
ಮಾಜಿಪುರಸಭಾ ಸದಸ್ಯ ಎಸ್.ಮುಜೀಬ್, ಕಲೀಂ, ಖಲೀಲ್, ಇಬ್ರಾಮ್, ಮಾರ್ಬಲ್‌ಸಲೀಂ, ಸರ್ವರ್‌ಸಾಬ್, ದಾವುದ್‌ಸಾಬ್, ಚಮನ್‌ಸಾಬ್, ಸಿ.ಆರ್.ಅಲ್ಲಾಬಕ್ಷಿ, ಅನಾಸ್ ಮುಂತಾದವರು ಉಪಸ್ಥಿತರಿದ್ದರು.