ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರದ ಅರ್ಬನ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕರಾಗಿದ್ದ ಟಿ ರಂಗನಾಥ್ (70) ಇವರು ಸೋಮವಾರ ಮಧ್ಯಾಹ್ನ 12.55ರ ಸಮಯದಲ್ಲಿ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿರುತ್ತಾರೆ.
ಮೃತರು ನಿವೃತ್ತ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಟಿ.ಬೋಜರಾಜ್ ಅವರು ಸೇರಿದಂತೆ ಪತ್ನಿ, ಪುತ್ರ ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.
ಜೂ.24 ರಂದು ಮಂಗಳವಾರ ಮಧ್ಯಾಹ್ನ ಪರಮೇನಹಳ್ಳಿ ಬಳಿ ಇರುವ ಅವರ ತೋಟದಲ್ಲಿ ಮೃತರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.