ಡಾ.ಮನಮೋಹನ್ ಸಿಂಗ್ ವಿವಿಯಿಂದ ತಗಡೂರು ಸುಜಾತಗೆ ಪಿಎಚ್‌ಡಿ ಪದವಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಕೇಂದ್ರದ ಡಾ.ಮನಮೋಹನ್ ಸಿಂಗ್ ವಿಶ್ವವಿದ್ಯಾಲಯದ ಜಾಗತಿಕ ಭಾಷೆಗಳ ಕೇಂದ್ರದ ಪ್ರೆಂಚ್ ಭಾಷೆಯ ಉಪನ್ಯಾಸಕಿ ತಗಡೂರು ಹಾಲಪ್ಪಗೌಡ ಸುಜಾತ (ಟಿ.ಪಿ.ಸುಜಾತ ಸ್ವಾಮಿ) ಅವರಿಗೆ ಪಿಎಚ್‌ಡಿ ನೀಡಲಾಗಿದೆ.

ಎರಡು ಮಹಾ ಸಾಂಕ್ರಾಮಿಕ ರೋಗಗಳಾದ 1918 ರ ಸ್ಪ್ಯಾನಿಷ್ ಜ್ವರ ಮತ್ತು 2019 ರ ಕೋವಿಡ್- 19 ರ ಸಂದರ್ಭದಲ್ಲಿ ರಾಷ್ಟ್ರದ ಮುಖ್ಯಸ್ಥರ ಪಾತ್ರದ ಹೋಲಿಕೆ ಕುರಿತು ಡಾ.ಮನಮೋಹನ್ ಸಿಂಗ್ ವಿವಿ ಪ್ರೊ.ಜ್ಯೋತಿ ವೆಂಕಟೇಶ್ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದು, ಈ ಪ್ರಬಂಧಕ್ಕೆ ಪಿಎಚ್‌ಡಿ ದೊರೆತಿದೆ.

- Advertisement - 

ತಗಡೂರು ಹಾಲಪ್ಪಗೌಡ ಮತ್ತು ರತ್ನಮ್ಮ ಅವರ ಸುಪುತ್ರಿಯಾಗಿರುವ ಟಿ.ಪಿ.ಸುಜಾತ ಅವರು ಹೈಕೋರ್ಟ್ ವಕೀಲರಾದ ಕುಮಾರಸ್ವಾಮಿ ಸ್ವಾಮಿ ಅವರ ಪತ್ನಿ.

- Advertisement - 

ಪ್ರೆಂಚ್ ಭಾಷೆಯಲ್ಲಿಯೇ ಅಧ್ಯಯನ ಮಾಡಿ ಪ್ರಬಂಧ ಮಂಡನೆ ಮಾಡಿ ಪಿಎಚ್‌ಡಿ ಪಡೆದಿರುವ ಟಿ.ಪಿ.ಸುಜಾತ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಸ್ಣಳೀಯ ಸಂಘ ಸಂಸ್ಥೆಗಳು, ತಗಡೂರು, ಮಾರನಗೆರೆ ಗ್ರಾಮಸ್ಥರು ಅಭಿನಂದಿಸಿದ್ದಾರೆ.

 

 

 

 

Share This Article
error: Content is protected !!
";