ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಲ್ಲಿ ಟ್ಯಾಂಕರ್ ಮಾಫಿಯಾ ಮತ್ತೆ ಶುರು! ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಬೇಸಿಗೆ ಕಾಲ ಇನ್ನೂ ಆರಂಭವೆ ಆಗಿಲ್ಲ, ಆಗಾಗಲೇ ಬೆಂಗಳೂರು ನಗರದಲ್ಲಿ ಟ್ಯಾಂಕರ್ ಮಾಫಿಯಾ ಜನರ ಸುಲಿಗೆ ಮಾಡಲು ಇಳಿದಿದ್ದು, ಕರ್ನಾಟಕ ಕಾಂಗ್ರೆಸ್ ಸರ್ಕಾರ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದೆ ಎಂದು ಅಶೋಕ್ ದೂರಿದ್ದಾರೆ.
ಪಾರ್ಟ್ ಟೈಂ ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ, ನಿಮಗೆ ಬ್ರ್ಯಾಂಡ್ ಬೆಂಗಳೂರಿನ ಬಗ್ಗೆ, ಬೆಂಗಳೂರಿನ ಜನತೆಯ ಬಗ್ಗೆ ಕಿಂಚಿತ್ತಾದರೂ ಕಾಳಜಿ, ಬದ್ಧತೆ ಇದ್ದರೆ, ಟ್ಯಾಂಕರ್ ಮಾಫಿಯಾದ ನಟ್ಟು-ಬೋಲ್ಟು ಟೈಟು ಮಾಡಿ ಅವರ ಛತ್ರಿ ಬುದ್ಧಿಗೆ ಕಡಿವಾಣ ಹಾಕಿ ಎಂದು ಬಿಜೆಪಿ ತಾಕೀತು ಮಾಡಿದೆ.
ರಾಜಕೀಯ ಸ್ವಹಿತಾಸಕ್ತಿಗೋಸ್ಕರ ಬೆಂಗಳೂರು ನಗರನವನ್ನ ಒಡೆಯುವಲ್ಲಿ ನಿಮಗಿರುವ ಆಸಕ್ತಿ, ಬೆಂಗಳೂರಿನ ಜನತೆಯ ಹಿತಾಸಕ್ತಿ ಕಾಪಾಡುವಲ್ಲಿ ಕಿಂಚಿತ್ತೂ ಕಾಣುತ್ತಿಲ್ಲ ಎಂದು ಬಿಜೆಪಿ ಆರೋಪಿಸಿದೆ.