ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಸಂತ ಶ್ರೇಷ್ಠರ ತಪಸ್ವೀ ಜೀವನ ಮನುಕುಲದ ಪ್ರೇರಕಶಕ್ತಿ” ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದರು.
ವಿಶ್ವ ಗಾಣಿಗರ ಸಮುದಾಯ ಚಾರಿಟಬಲ್ ಟ್ರಸ್ಟ್ ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಶ್ರೀಮಠದ ಸಂಸ್ಥಾಪಕರಾದ ಪರಮಪೂಜ್ಯ ಶ್ರೀ ಪೂರ್ಣಾನಂದಪುರಿ ಮಹಾಸ್ವಾಮಿಗಳ 4 ನೇ ಪಟ್ಟಾಭಿಷೇಕ ಮಹೋತ್ಸವ ಹಾಗೂ ಶ್ರೀ ಪೀಠ ಸ್ಥಾಪನೆಯ 3 ನೇ ವಾರ್ಷಿಕೋತ್ಸವ ಮತ್ತು ನೂತನ ಜ್ಞಾನ ಮಂದಿರ ಕಟ್ಟಡ ಹಾಗೂ ನೂತನ ಟ್ರಸ್ಟ್ ನ ಕಛೇರಿ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಬದ್ಧತೆಯನ್ನು ಇಟ್ಟುಕೊಂಡು ಶ್ರೀಗಳ ನೇತೃತ್ವದಲ್ಲಿ ಸ್ವಾವಲಂಬಿ ಸಮಾಜವನ್ನು ಕಟ್ಟುತ್ತಿರುವ ಶ್ರೀಮಠದ ಶ್ರೇಷ್ಠ ಕಾರ್ಯಗಳನ್ನು ಪ್ರಶಂಸಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಕೈಲಾಸ ಆಶ್ರಮದ ಪರಮಪೂಜ್ಯ ಶ್ರೀ ಜಯೇಂದ್ರಪುರಿ ಶ್ರೀಗಳು, ಪರಮಪೂಜ್ಯ ಶ್ರೀ ಜಯಬಸವ ಕುಮಾರ ಶ್ರೀಗಳು, ಪರಮಪೂಜ್ಯ ಶ್ರೀ ಮಡಿವಾಳೇಶ್ವರ ಶ್ರೀಗಳು, ಪರಮಪೂಜ್ಯ ಶ್ರೀ ದಿವ್ಯ ಜ್ಞಾನನಂದಪುರಿ ಸ್ವಾಮೀಜಿ, ಪರಮಪೂಜ್ಯ ಶ್ರೀ ಗೋವರ್ಧನ ನಂದಪುರಿ ಶ್ರೀಗಳು, ಪರಮಪೂಜ್ಯ ಪ್ರಣಾವಾನಂದ ಶ್ರೀಗಳು, ಪೂಜ್ಯ ರಮಣಾನಂದನಾಥ ಶ್ರೀಗಳು, ಮಾಜಿ ಶಾಸಕರಾದ ಎಂ.ವಿ.ನಾಗರಾಜು, ಪಕ್ಷದ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಮುಖಂಡರಾದ ವೇಣುಗೋಪಾಲ್, ಬೃಂಗೇಶ್, ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಶ್ರೀಮಠದ ಭಕ್ತಾದಿಗಳು ಉಪಸ್ಥಿತರಿದ್ದರು.

