ಟಿಎಪಿಸಿಎಂಎಸ್ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟದ ಸಹಕಾರ ಸಂಘಕ್ಕೆ (ಟಿಎಪಿಸಿಎಂಎಸ್) ಶುಕ್ರವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಹೆಚ್.ಎಂ.ಮಂಜುನಾಥಪ್ಪ ಕೋಗುಂಡೆ, ಉಪಾಧ್ಯಕ್ಷರಾಗಿ ಕೆ.ಆರ್.ರವಿ ಸಿಂಗಾಪುರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಳೆದ ಅ.13ರಂದು ನಡೆದ ಆಡಳಿತ ಮಂಡಲಿ ನಿರ್ದೇಶಕರ ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್.ಎನ್.ಹನುಮಂತಪ್ಪ ಕೋಡಿರಂಗವ್ವನಹಳ್ಳಿ, ಜಿ.ಆರ್.ಧನಂಜಯ ಯಳಗೋಡು, ಟಿ.ಸಣ್ಣತಿಮ್ಮಪ್ಪ ವಡ್ಡರಸಿದ್ದವ್ವನಹಳ್ಳಿ, ಎನ್.ಕಲ್ಲೇಶ್ ಭರಮಸಾಗರ, ಹೆಚ್.ನಿರಂಜನಮೂರ್ತಿ ಅನ್ನೇಹಾಳ್, ಎಸ್..ಹೆಚ್.ತಿಪ್ಪೇಸ್ವಾಮಿ ಸಿರಿಗೆರೆ, ಎಂ.ಎಸ್.ಪ್ರಸನ್ನ ಸಿರಿಗೆರೆ, ದೇವರಾಜ್.ಬಿ.ಎನ್ ಕೊಡಗವಳ್ಳಿ, ನಾಗರಾಜ್.ಜಿ.ಎಸ್ ಹಿರೇಕಬ್ಬಿಗೆರೆ,

- Advertisement - 

ಕೆ.ಜಿ.ಕವಿತ ಬಸವಕುಮಾರ್ ಸಿರಿಗೆರೆ, ಶಾಂತಕುಮಾರಿ.ಬಿ.ಎಸ್‍ಚಿಕ್ಕಬೆನ್ನೂರು ನಿರ್ದೇಶಕರುಗಳಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆಂದು ಚುನಾವಣಾಧಿಕಾರಿ ಎಸ್.ಮಹಮ್ಮದ್‍ಯೂನಸ್ ಫರ್ವಿಜ್ ಘೋಷಣೆ ಮಾಡಿದರು.

ಜಿಲ್ಲಾ ಬ್ಯಾಂಕ್‍ನ ನಾಮ ನಿರ್ದೇಶಕರಾದ ಎಂ.ನಿಶಾನಿ ಜಯಣ್ಣ ಬುರುಜನಹಟ್ಟಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪದನಿಮಿತ್ತ ನಿರ್ದೇಶಕರಾಗಿರುತ್ತಾರೆ. ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಜಿ.ಎನ್.ಉಮಾಶಂಕರ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

- Advertisement - 

Share This Article
error: Content is protected !!
";