ಚಂದ್ರವಳ್ಳಿ ನ್ಯೂಸ್, ಪಂಜಾಬ್ : ಆಮ್ ಆದ್ಮಿ ಪಕ್ಷದ (ಎಎಪಿ) ಕಿಸಾನ್ ವಿಂಗ್ ಅಧ್ಯಕ್ಷ ತರ್ಲೋಚನ್ ಸಿಂಗ್ ಅಲಿಯಾಸ್ ಡಿಸಿ ಅವರನ್ನು ಸೋಮವಾರ ಸಂಜೆ ಪಂಜಾಬ್‌ನ ಖನ್ನಾದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಕೊಲಾಹ ಗ್ರಾಮದ 56 ವರ್ಷದ ನಾಯಕ ತನ್ನ ಜಮೀನಿನಿಂದ ಮನೆಗೆ ಹಿಂದಿರುಗುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.
ನಾಯಕನ ಮೃತದೇಹ ರಸ್ತೆಬದಿಯಲ್ಲಿ ಬಿದ್ದಿದ್ದು, ಆತನ ಪುತ್ರ ಸ್ಥಳೀಯರ ನೆರವಿನೊಂದಿಗೆ ಸಮೀಪದ ಆಸ್ಪತ್ರೆಗೆ ಕರೆತಂದಿದ್ದಾರೆ. ಆಸ್ಪತ್ರೆಯ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು. ಸಿಂಗ್ ಅವರ ಪುತ್ರ ಹರ್‌ಪ್ರೀತ್ ಸಿಂಗ್ ಅವರು ದ್ವೇಷದಿಂದ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಪೊಲೀಸರು ಪ್ರತಿಯೊಂದು ಕೋನದಿಂದ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ ಎಂದು ಎಸ್‌ಪಿ ಸೌರವ್ ಜಿಂದಾಲ್ ಹೇಳಿದ್ದಾರೆ. “ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು” ಎಂದು ಹೇಳಿದರು.