ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಯುವ ಕವಿ ತರುಣ್ ಎಂ. ಆಂತರ್ಯ ಅವರ ಕೃತಿಗೆ ರಾಜ್ಯ ಮಟ್ಟದ ಗೌರವ
ಕರ್ನಾಟಕ ಸರ್ಕಾರ, ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಯುವ ಬರಹಗಾರರ ಚೊಚ್ಚಲ ಕೃತಿಗೆ ನೀಡುವ ಸಹಾಯಧನಕ್ಕೆ ಹಿರಿಯೂರು ತಾಲ್ಲೂಕಿನ ಟಿ. ನಾಗೇನಹಳ್ಳಿ ಗ್ರಾಮದ ಯುವ ಕವಿ ತರುಣ್ ಎಂ. ಆಂತರ್ಯ ಅವರ ಬಿಗಿ ಹಿಡಿದ ಮುಷ್ಟಿಯಲಿ ಕವನ ಸಂಕಲನ ಆಯ್ಕೆಯಾಗಿದೆ.
ಮಾರ್ಚ್ 10 ರಂದು ಬೆಂಗಳೂರಿನ ಕನ್ನಡ ಭವನದ, ನಯನ ರಂಗಮಂದಿರದಲ್ಲಿ, ಹೆಸರಾಂತ ಲೇಖಕರು ಹಾಗೂ ಚಲನಚಿತ್ರ ನಿರ್ದೇಶಕರಾದ ಡಾ. ನಾಗತಿಹಳ್ಳಿ ಚಂದ್ರಶೇಖರ್ ಅವರು ಕಾರ್ಯಕ್ರಮ ಉದ್ಘಾಟಿಸಿ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ.

