ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ಸರ್ಕಾರ ಹಾಲಿನ ಬೆಲೆ ಏರಿಸಿರುವುದರಿಂದ ಮತ್ತು ತ್ಯಾಜ್ಯಕ್ಕೂ ಶುಲ್ಕ ವಿಧಿಸಿರುವುದರಿಂದ ಹೋಟೆಲ್‌ಮಾಲಿಕರು ಕಂಗೆಟ್ಟಿದ್ದಾರೆ. ಬೆಲೆ ಏರಿಕೆಯ ಹೊರೆಯನ್ನು ಹೋಟೆಲ್‌ಮಾಲೀಕರು ಗ್ರಾಹಕರ ತಲೆ ಮೇಲೆ ಹೊರಿಸುತ್ತಿದ್ದಾರೆ. ಇದರಿಂದಾಗಿ ಜನಸಾಮಾನ್ಯರು ಕಾಫಿ, ಟೀ ಕುಡಿಯುವುದೂ ದುಸ್ತರವಾಗಿದೆ ಎಂದು ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ.
ಹೋಟೆಲ್‌ಗಳಲ್ಲಿ ಟೀ, ಕಾಫಿ 2 ರಿಂದ 5 ರೂಪಾಯಿವರೆಗೆ ಏರಿಕೆಯಾಗಿದೆ. ಸರ್ಕಾರ ಪದೇ ಪದೆ ಹಾಲಿನ ದರವನ್ನು ಏರಿಕೆ ಮಾಡುತ್ತಿರುವುದರಿಂದ ಅತ್ತ ಹೋಟೆಲ್‌ಮಾಲೀಕರಿಗೂ ಸಂಕಷ್ಟ, ಇತ್ತ ಗ್ರಾಹಕರಿಗೂ ಬರೆ ಎನ್ನುವಂತಾಗಿದೆ.
ಸರ್ಕಾರದ ಗ್ಯಾರಂಟಿಗಳು ರಾಜ್ಯದ ಆರ್ಥಿಕ ಪರಿಸ್ಥಿತಿಯು ದಿವಾಳಿಯಾಗಿರುವುದನ್ನು ಸೂಚಿಸುತ್ತಿದೆ. ಸರ್ಕಾರದ ಖಜಾನೆ ಕರಗುತ್ತಿರುವ ಕಾರಣದಿಂದಲೇ ಬೆಲೆ ಏರಿಕೆಯ ಹಾದಿ ಹಿಡಿದಿದೆ. ಜನರ ಮೇಲೆ ಬೆಲೆ ಏರಿಕೆ, ತೆರಿಗೆ ಯುದ್ಧ ಸಾರಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಜನಾಕ್ರೋಶ ಯಾತ್ರೆ ಮೂಲಕ ರಾಜ್ಯದ ಜನರು ಹಿಡಿಶಾಪ ಹಾಕುತ್ತಿದ್ದಾರೆ ಎಂದು ಬಿಜೆಪಿ ತಿಳಿಸಿದೆ.