ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿದ್ಯಾರ್ಥಿಯ ಕೆನ್ನೆಗೆ ಹೊಡೆದ ಶಿಕ್ಷಕ ಅರೆಸ್ಟ್ ಆಗಿರುವ ಘಟನೆ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
ಬೆಂಗಳೂರಿನ ನಾರಾಯಣ ಇ-ಸ್ಕೂಲ್ನ ದೈಹಿಕ ಶಿಕ್ಷಕ ರಾಜೇಶ್ ಎನ್ನುವರು 7ನೇ ತರಗತಿ ವಿದ್ಯಾರ್ಥಿಯ ಕೆನ್ನೆಗೆ ಹೊಡೆದಿದ್ದು ಅವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಹುಳಿಮಾವು ಪೊಲೀಸರು, ಆರೋಪಿ ಶಿಕ್ಷಕ ರಾಜೇಶ್ ಅವರನ್ನು ಬಂಧಿಸಿದ್ದಾರೆ.
ಆರೋಪಿ ಶಿಕ್ಷಕ ರಾಜೇಶ್ 7ನೇ ತರಗತಿ ವಿದ್ಯಾರ್ಥಿಯನ್ನು ಸ್ಟಾಫ್ ರೂಂಗೆ ಕರೆಸಿ ಶಿಕ್ಷಕರ ಮುಂದೆ ವಿದ್ಯಾರ್ಥಿ ಕೆನ್ನೆಗೆ ಹೊಡೆದ ಏಟಿಗೆ ವಿದ್ಯಾರ್ಥಿಯ ಕೆನ್ನೆ ಊದಿಕೊಂಡಿದೆ. ಇದರಿಂದ ಬಾಲಕ ಮನೆಗೆ ಹೋಗಿರಲಿಲ್ಲ. ಪೋಷಕರು ಆತಂಕಗೊಂಡ ಶಾಲೆಗೆ ತೆರಳಿ ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ವಿದ್ಯಾರ್ಥಿ ಮಂಜು ಕುಮಾರ್(ಹೆಸರು ಬದಲಾಯಿಸಲಾಗಿದೆ) ಶಾಲೆಗೆ ಬಂದಾಗ ಕೆನ್ನೆ ಊದಿಕೊಂಡಿರುವ ವಿಷಯ ಗೊತ್ತಾಗಿದೆ.
ಕೂಡಲೇ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹುಳಿಮಾವು ಠಾಣೆಯಲ್ಲಿ ಶಿಕ್ಷಕ ರಾಜೇಶ್ ವಿರುದ್ಧ ದೂರು ದಾಖಲಿಸಿದ್ದು ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ಆರೋಪಿ ಶಿಕ್ಷಕನನ್ನು ಬಂಧಿಸಿದ್ದಾರೆ.
ಶಿಕ್ಷಕ ಏಕೆ ಹೊಡೆದ?
ವಿದ್ಯಾರ್ಥಿ ಮಂಜು ಕುಮಾರ್ ಊಟ ಮಾಡುವ ವೇಳೆ ಸಹಪಾಠಿಯ ಕುರ್ಚಿ ಎಳೆದಿದ್ದ. ಕ್ಲಾಸ್‌ರೂಂನಲ್ಲಿಯೂ ಇದೇ ರೀತಿ ಕುರ್ಚಿ ಎಳೆದಿದ್ದರಿಂದ ವಿದ್ಯಾರ್ಥಿ ಕೆಳಗೆ ಬಿದ್ದಿದ್ದ. ಕೆಳಗೆ ಬಿದ್ದ ವಿದ್ಯಾರ್ಥಿ ನೇರವಾಗಿ ಶಿಕ್ಷಕ ರಾಜೇಶ್ ಬಳಿ ತೆರಳಿ ಮಂಜು ಕುಮಾರ್ ವಿರುದ್ಧ ದೂರು ಹೇಳಿದ್ದ. ಶಿಕ್ಷಕ ರಾಜೇಶ್, ಆ ವಿದ್ಯಾರ್ಥಿಯ ನ್ನು ಸ್ಟಾಪ್ ರೂಂಗೆ ಕರೆದು ಕಪಾಳಕ್ಕೆ ಹೊಡೆದಿದ್ದರು ಎನ್ನಲಾಗಿದೆ.

