ಚಂದ್ರವಳ್ಳಿ ನ್ಯೂಸ್, ಮೈಸೂರು:
ಶಿಕ್ಷಕಿ ಕಾಂಚನಾ ಅವರು ತಮ್ಮ ಸ್ವಂತ ಹಣದಲ್ಲಿ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಪೊಲೀಸ್ ಠಾಣೆಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆಂದು ಕರೆ ತಂದು ವಿಶೇಷತೆ ಮೆರೆದಿದ್ದಾರೆ.
ಕಳೆದ 45 ವರ್ಷದ ಹಿಂದೆ ಶಿಕ್ಷಕಿ ಕಾಂಚನಾ ಅವರ ತಂದೆ ಶ್ರೀನಿವಾಸ ಮೂರ್ತಿ ಬೈಲಕುಪ್ಪೆ ಪೊಲೀಸ್ ಠಾಣೆ ಸಬ್ ಇನ್ಸಪೆಕ್ಟರ್ ಆಗಿದ್ದರು. ಠಾಣೆಯಲ್ಲಿ ಸೇವೆ ಸಲ್ಲಿಸಿದ ಅಧಿಕಾರಿಗಳ ನಾಮಫಲಕ ಪಟ್ಟಿಯಲ್ಲಿ ಶ್ರೀನಿವಾಸ ಮೂರ್ತಿ ಅವರ ಹೆಸರು ತೋರಿಸಲು ಮತ್ತು ಮತ್ತು ಮಕ್ಕಳಲ್ಲಿನ ಪೊಲೀಸ್ ಭಯ ಹೋಗಲಾಡಿಸಲು ಸುಮಾರು 86 ವಿದ್ಯಾರ್ಥಿಗಳನ್ನು ಕಾಂಚನಾ ಪ್ರವಾಸಕ್ಕೆ ಕರೆತಂದಿದ್ದಾರೆ.
ಪೊಲೀಸ್‌ಠಾಣೆಯ ದೈನಂದಿನ ಕರ್ತವ್ಯದ ಬಗ್ಗೆ, ಸಾರ್ವಜನಿಕರ ಆಸ್ತಿಪಾಸ್ತಿ ರಕ್ಷಣೆ, ಹಕ್ಕುಗಳ ರಕ್ಷಣೆ ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಶಿಕ್ಷಕಿ ಕಾಂಚನಾ ಮಕ್ಕಳಿಗೆ ತಿಳಿಸಿ ಹೇಳಿದರು.
ಬಳಿಕ ಮಕ್ಕಳು ಪೊಲೀಸರಿಗೆ ಹಲವು ಪ್ರಶ್ನೆಗಳನ್ನು ಕೇಳಿದರು. ಸರ್ ಇಸ್ಪೀಟ್ ಆಟವನ್ನು ಎಲ್ಲ ಕಡೆ ಆಡುತ್ತಾರಲಾ ಅದನ್ನು ಆಡಲೇಬೇಕಾ? ಆನ್ ಲೈನ್ ಗೇಮ್ ಎಲ್ಲ ಕಡೆ ಬರುತ್ತದಲ್ಲ ಅದನ್ನ ಯಾರ್ ಸರ್ ಆಡುವುದು? ಹೀಗೆ ಹಲವು ಪ್ರಶ್ನೆಗಳನ್ನು ಕೇಳಿ ಪೊಲೀಸರನ್ನು ಬೆಚ್ಚಿ ಬೀಳಿಸಿದರು.