ಶಿಕ್ಷಕರ ಸಮಸ್ಯೆಗಳ ಪ್ರಾಮಾಣಿಕ ಪ್ರಯತ್ನಕ್ಕಾಗಿ ಶಿಕ್ಷಕರು ನನ್ನನ್ನು ಬೆಂಬಲಿಸಬೇಕು-ಎ. ಪಿ. ರಂಗನಾಥ್

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
 ಶಿಕ್ಷಕರ ಕ್ಷೇತ್ರದ ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ನಾನು ಪ್ರಾಮಾಣಿಕ ಪ್ರಯತ್ನ ಮಾಡಲಿದ್ದು, ಮುಂಬರುವ ಪದವೀಧರ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಎಲ್ಲಾ ಶಿಕ್ಷಕ ಉಪನ್ಯಾಸಕ ಬಂದುಗಳು ನನ್ನನ್ನು ಬೆಂಬಲಿಸಬೇಕೆಂದು ಬೆಂಗಳೂರು ಪದವೀಧರ ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿ, ವಕೀಲ ಎ. ಪಿ. ರಂಗನಾಥ್ ಮನವಿ ಮಾಡಿದರು. 

       ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ರಂಗನಾಥ್ ರವರು ಮಾತನಾಡಿ ಮುಂದಿನ ವರ್ಷ ನವೆಂಬರ್ ನಲ್ಲಿ ನಡೆಯುವ ಬೆಂಗಳೂರು ಶಿಕ್ಷಕ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಸ್ಪರ್ದಿಸಲಿದ್ದೇನೆ. 2019ರಲ್ಲಿ ಜೆಡಿಎಸ್ ಪಕ್ಷದಿಂದ ಹಾಗೂ ಕಳೆದ ಉಪ ಚುನಾವಣೆಯಲ್ಲಿ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಸ್ಪರ್ದಿಸಿ ಅತ್ಯಂತ ಕಡಿಮೆ ಮತಗಳ ಅಂತರದಿಂದ ಪರಾಭವ ಗೊಂಡಿದ್ದೇನೆ.

- Advertisement - 

ಈ ಬರೀ ಕ್ಷೇತ್ರದಲ್ಲಿ ನನಗೆ ಶಿಕ್ಷಕರ ಹಾಗೂ ಪ್ರಾಧ್ಯಾಪಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಈ ಬಾರಿ ನಾನು ಜಯ ಗಳಿಸುವ ವಿಶ್ವಾಸವಿದೆ. ಇದುವರೆಗೂ ಈ ಕ್ಷೇತ್ರವನ್ನು ಪ್ರತಿನಿಧಿಸಿದ ವಿಧಾನ ಪರಿಷತ್ ಸದಸ್ಯರು ಶಿಕ್ಷಕರ ಯಾವುದೇ ಸಮಸ್ಯೆಗಳನ್ನು ಪರಿಹರಿಸದೆ ಕಾಲಹರಣ ಮಾಡಿದ್ದಾರೆ. ಕಳೆದ ಬಾರಿ ಎನ್. ಪಿ. ಎಸ್. ಬದಲು ಒ. ಪಿ. ಎಸ್. ಜಾರಿ ಮಾಡಲು ಸರ್ಕಾರಕ್ಕೆ ಒತ್ತಡ ತಂದು ಜಾರಿ ಮಾಡಿಸುತ್ತೇನೆ ಎಂದು ಬರವಸೆಯನ್ನು ನೀಡಿ ಗೆದ್ದವರು ಈ ಬಗ್ಗೆ ವಿಧಾನ ಪರಿಷತ್ ನಲ್ಲಿ ಒಂದು ಬಾರಿಯೂ ದ್ವನಿ ಎತ್ತಲಿಲ್ಲ.

ಶಿಕ್ಷಕರ ಹೆಲ್ತ್ ಕಾರ್ಡ್ ಆಶ್ವಾಸನೆ ಕೊಟ್ಟವರು ಅದಕ್ಕೆ ಕನಿಷ್ಠ ಪ್ರಯತ್ನವನ್ನು ಮಾಡಲಿಲ್ಲ. ಈಗಾಗಲೇ ಕಾಂಗ್ರೆಸ್ ಸರ್ಕಾರದಿಂದ ಭ್ರಷ್ಟಾಚಾರ ಮಿತಿ ಮೀರಿದ್ದು ಅದರ ಬಗ್ಗೆ ಒಂದು ದಿನವೂ ಅಧಿವೇಶನದಲ್ಲಿ ಪ್ರಶ್ನೆ ಮಾಡಿಲ್ಲ. ವರ್ಷ ಪೂರ್ತಿ ಶಿಕ್ಷಕರು ತಮ್ಮ ವೃತ್ತಿಯ ಜೊತೆಗೆ ಜಾತಿ ಗಣತಿ, ಜನಗಣತಿ ಸೇರಿದಂತೆ ಸರ್ಕಾರದ ಹಲವು ಅವೈಜ್ಞಾನಿಕ ನೀತಿಯಿಂದ ಕಂಗೆಟ್ಟಿದ್ದಾರೆ.

- Advertisement - 

ಅವರ ಸಮಸ್ಯೆಗಳನ್ನು ಆಲಿಸಲು ಸಹ ಯಾರೂ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತ ಸಂದರ್ಭದಲ್ಲಿ ಶಿಕ್ಷಕರ ಬೆನ್ನಿಗೆ ನಿಲ್ಲ ಬೇಕಿದ್ದ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣವರು ಪಲಾಯನವಾದಿ ಯಾಗಿದ್ದಾರೆ. ಈಗಾಗಲೇ ಹಣ ಬಲದಿಂದ ಮೂರು ಬಾರಿ ಗೆದ್ದು ಹೋದವರು ಶಿಕ್ಷಕರ ಕೈಗೆ ಸಿಗುತ್ತಿಲ್ಲ. ಬರಿ ಚುನಾವಣೆ ಬಂದಾಗ ಮಾತ್ರ ಕ್ಷೇತ್ರದ ನೆನಪಾಗಿ ಶಿಕ್ಷಣ ಸಂಸ್ಥೆಗಳಿಗೆ ಬೇಟಿ ನೀಡಿ ಒಂದಷ್ಟು ಆಶ್ವಾಸನೆ ನೀಡುವುದು ಇವರ ಚಾಲಳಿಯಾಗಿದೆ.

ಜೊತೆಗೆ ಯಾವ ಪಕ್ಷ ಅಧಿಕಾರದಲ್ಲಿರುತ್ತದೋ ಆ ಪಕ್ಷಕ್ಕೆ ಪಕ್ಷಾಂತರ ಮಾಡುವುದು ಪುಟ್ಟಣ್ಣ ನವರ ಹುಟ್ಟು ಗುಣ. ಇಂತವರಿಂದ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಸಿಗುವುದು ಕಷ್ಟ ಸಾಧ್ಯ ಎಂಬುದನ್ನು ಕ್ಷೇತ್ರದ ಶಿಕ್ಷಕರು ಮನಗಂಡಿದ್ದಾರೆ. ಹೀಗಾಗಿ ಕ್ಷೇತ್ರವರು ಶಿಕ್ಷಕರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ನಾನು ಈಗಾಗಲೇ ಮೈತ್ರಿ ಪಕ್ಷದ ಎಲ್ಲಾ ಮುಖಂಡರನ್ನು ಬೇಟಿ ಮಾಡಿದ್ದೇನೆ. ಅವರೆಲ್ಲರೂ ನನ್ನ ಪರವಾಗಿದ್ದಾರೆ.

ಕಳೆದ ಎರಡು ಬಾರಿ ಕಡಿಮೆ ಅಂತರದಿಂದ ಸೋತಿರುವ ನನ್ನ ಬಗ್ಗೆ ಎಲ್ಲರಿಗೂ ಒಳ್ಳೆಯ ಅಭಿಪ್ರಾಯವಿದೆ. ಈ ಎಲ್ಲಾ ಕಾರಣಗಳಿಂದ ನಾನು ಈ ಬಾರಿ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಸ್ಪರ್ದಿಸುತ್ತಿದ್ದೇನೆ. ನನ್ನ ಸ್ಪರ್ಧೆಗೆ ತಾಲೂಕಿನ ಎಲ್ಲಾ ಶಿಕ್ಷಕ ಬಂದುಗಳು ಸಹಕಾರ ನೀಡಬೇಕಿದೆ ಎಂದು ರಂಗನಾಥ್ ಹೇಳಿದರು. 

          ಸುದ್ದಿ ಗೋಷ್ಠಿಯಲ್ಲಿ ಪ್ರಕಾಶ್, ನಗರಸಭೆ ಸ್ಥಾಯಿ ಸಮಿತಿ ಸಮಿತಿ ಅಧ್ಯಕ್ಷ ವಡ್ಡರಹಳ್ಳಿ ರವಿ, ನಗರಸಭೆ ಮಾಜಿ ಸದಸ್ಯ ಕೆಂಪರಾಜ್, ಟಿ. ಎ. ಪಿ. ಎಂ. ಸಿ. ಎಸ್. ಮಾಜಿ ಅಧ್ಯಕ್ಷ, ವಕೀಲ ಅಂಜನ್ ಗೌಡ ಹಾಜರಿದ್ದರು.

 

 

 

 

 

Share This Article
error: Content is protected !!
";