ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತುಮಕೂರಿನಲ್ಲಿ ನಡೆದ ನ್ಯಾಷನಲ್ ಯೋಗ ಚಾಂಪಿಯನ್ಶಿಪ್ ನಲ್ಲಿ ದೊಡ್ಡಬಳ್ಳಾಪುರದ ಶ್ರೀ ಯೋಗಾ ದೀಪಿಕಾ ಯೋಗ ಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿ ತಂಡ ಪ್ರಶಸ್ತಿ ಟ್ರೋಪಿಯನ್ನು ಪಡೆದಿದ್ದಾರೆ.
ವಿಜೇತರು . 6 ವರ್ಷ ವಿಭಾಗದಲ್ಲಿ ಅಯ್ಯಪ್ಪ. ದ್ವಿತೀಯ ಸ್ಥಾನ, 16 ರಿಂದ 20 ವರ್ಷದ ವಿಭಾಗದಲ್ಲಿ ಗಗನ. ವಿ ತೃತಿಯ ಸ್ಥಾನ ಪಡೆದಿದ್ದಾರೆ.
6 ರಿಂದ 10 ವರ್ಷದ ವಿಭಾಗದಲ್ಲಿ ಡಿ ಪ್ರಿಯಾಂಕ ನಾಲ್ಕನೇ ಸ್ಥಾನ, 11 ರಿಂದ 15 ವರ್ಷದ ವಿಭಾಗದಲ್ಲಿ ಯಶಸ್ವಿನಿ ಎ ಜಿ ನಾಲ್ಕನೇ ಸ್ಥಾನ ಪಡೆದು ಥೈಲ್ಯಾಂಡ್ ನಲ್ಲಿ ನಡೆಯುವ ಅಂತರಾಷ್ಟ್ರೀಯ ಯೋಗಾಸನ ಚಾಂಪಿಯನ್ ಶಿಪ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳಿಗೆ ಜನಪ್ರಿಯ ಶಾಸಕರಾದ ಧೀರಜ್ ಮುನಿರಾಜ್, ಯೋಗ ಶಿಕ್ಷಕರಾದ ಕೂರ್ಮಾಸನ ತಜ್ಞ ಹೆಚ್. ಎಸ್. ರಾಮಕೃಷ್ಣ, ಸಹ ಶಿಕ್ಷಕ ಕಾರ್ತಿಕ್ ರವರು ಅಭಿನಂದಿಸಿದ್ದಾರೆ.

