ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸ್ವೀಡನ್‌ನಲ್ಲಿ ಕರ್ನಾಟಕದ ಹೂಡಿಕೆ ಸಾಮರ್ಥ್ಯ ಪ್ರದರ್ಶನಕ್ಕೆ ಸಿದ್ಧವಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಹೇಳಿದರು.
ನಮ್ಮ ನಿಯೋಗವು ಸ್ವೀಡನ್ ಪ್ರವಾಸದ ವೇಳೆ ವಿವಿಧ ವಲಯದಲ್ಲಿ ಪಾರಮ್ಯ ಸಾಧಿಸಿರುವ ಕಂಪನಿಗಳನ್ನು ಭೇಟಿ ಮಾಡಿ ಚರ್ಚಿಸಲಾಯಿತು ಎಂದು ಸಚಿವರು ತಿಳಿಸಿದರು.
ಟೆಲಿಕಾಂ ಕ್ಷೇತ್ರ ವಿಸ್ತಾರಕ್ಕೆ ಕರ್ನಾಟಕದಲ್ಲಿರುವ ಅವಕಾಶಗಳ ಬಗ್ಗೆ ಜಾಗತಿಕ ಟೆಲಿಕಾಂ ದೈತ್ಯ ಕಂಪನಿ ಎರಿಕ್ಸನ್ ಗೆ ಮನದಟ್ಟು ಮಾಡಲಾಯಿತು. ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಗೆಟಿಂಗೆ ಸಂಸ್ಥೆಯ ಪ್ರಮುಖರೊಂದಿಗೆ ತಂತ್ರಜ್ಞಾನ ಹಾಗೂ ಸಂಶೋಧನಾ ಸಹಕಾರದ ಬಗ್ಗೆ ಮಾತುಕತೆ ನಡೆಸಲಾಯಿತು. ಜೊತೆಗೆ, ಆಹಾರ ತಂತ್ರಜ್ಞಾನ ಕ್ಷೇತ್ರದಲ್ಲಿನ ಪಾಲುದಾರಿಕೆ ಬಲಪಡಿಸಲು ಟೆಟ್ರಾಪ್ಯಾಕ್ ಜೊತೆ ಸಮಾಲೋಚನೆ ನಡೆಸಲಾಯಿತು ಎಂದು ಸಚಿವರು ತಿಳಿಸಿದರು.
ಮುಂದಿನ ಪೀಳಿಗೆಗೆ ಅಗತ್ಯವಿರುವ ಡಿಜಿಟಲ್ ಮೂಲಸೌಕರ್ಯ ನಿರ್ಮಾಣ, ಆರೋಗ್ಯ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ಆಧಾರಿತ ಬೆಳವಣಿಗೆ, ಆಹಾರ ಸಂಸ್ಕರಣೆ ಹಾಗೂ ಪ್ಯಾಕೇಜಿಂಗ್ ನಲ್ಲಿ ಜಾಗತಿಕ ಗುಣಮಟ್ಟದ ಸಾಧನೆಯಂತಹ ಗುರಿ ನಮ್ಮದಾಗಿದ್ದು ಅವುಗಳ ಫಲಶ್ರುತಿಗೆ ಈ ಪ್ರವಾಸ ಕಾರಣವಾಗಲಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಅಭಿಪ್ರಾಯಪಟ್ಟರು.