ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಜಿ ಉಮೇಶ್ ಬಾಬು ರವರ ಕಚೇರಿಯಲ್ಲಿ ರೈತ ಮುಖಂಡರ ಸಭೆ ನಡೆಸಲಾಯಿತು.
ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ಮುಂದೆ ಜನವರಿ-26 ರಂದು ರಂದು ಕಪ್ಪು ಪಟ್ಟಿ ಧರಿಸಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿರುವುದನ್ನು ಕೈ ಬಿಡುವಂತೆ ರೈತ ಮುಖಂಡರಲ್ಲಿ ಮನವಿ ಮಾಡಿಕೊಳ್ಳಲಾಯಿತು
ಪೊಲೀಸ್ ಇಲಾಖೆಯ ಮನವಿಯನ್ನು ಮನ್ನಿಸಿ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಮುಂದೂಡಲಾಯಿತು.
ಸಭೆಯಲ್ಲಿ ಬೇಡರೆಡ್ಡಿಹಳ್ಳಿ ಬಸವ ರೆಡ್ಡಿ, ಮರ್ಲಹಳ್ಳಿ ರವಿಕುಮಾರ್ ಬೇಡರೆಡ್ಡಿ ಹಳ್ಳಿ ಪ್ರಶಾಂತ್ ರೆಡ್ಡಿ ಮೊಳಕಾಲ್ಮೂರು ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಡಿಸಿ ನಾಗರಾಜ್ ಹಿರೇಹಳ್ಳಿ ಎದ್ದಲ ತಿಪ್ಪೇಸ್ವಾಮಿ ಮಲ್ಲಸಮುದ್ರ ಗಂಗಾಧರ ವಾಗೀಶ್ ನಾಗರಾಜ್ ಡಿ ಚಂದ್ರಶೇಖರ್ ನಾಯಕ್ ಹಾಗೂ ಡಿಎಸ್ಎಸ್ ಹಿರಿಯ ಮುಖಂಡರಾದ ರಾಜಣ್ಣ ಉಪಸ್ಥಿತರಿದ್ದರು.

