ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲಿಗೆ  ತಾತ್ಕಾಲಿಕ ನಿಲುಗಡೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಕ್ಕಿಹೆಬ್ಬಾಳುವಿನಲ್ಲಿ ಮೈಸೂರು-ತಾಳಗುಪ್ಪ ಇಂಟರ್ ಸಿಟಿ  ಎಕ್ಸ್ ಪ್ರೆಸ್ ಗೆ  ತಾತ್ಕಾಲಿಕ ನಿಲುಗಡೆ.

ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳಿನ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ, ನೈಋತ್ಯ ರೈಲ್ವೆ ಯು ಮೈಸೂರು-ತಾಳಗುಪ್ಪ ನಿಲ್ದಾಣಗಳ ನಡುವೆ ಸಂಚರಿಸುವ ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲುಗಳಿಗೆ ಫೆ 11 ರಿಂದ 16, 2025 ರವರೆಗೆ ಅಕ್ಕಿಹೆಬ್ಬಾಳು ನಿಲ್ದಾಣದಲ್ಲಿ ಒಂದು ನಿಮಿಷ ತಾತ್ಕಾಲಿಕ ನಿಲುಗಡೆ ಒದಗಿಸಲು ಅವಕಾಶ ಕಲ್ಪಿಸಿಲಾಗಿದೆ.

ಅಕ್ಕಿಹೆಬ್ಬಾಳುವಿನಲ್ಲಿ ಈ ಕೆಳಗಿನ ವೇಳಾಪಟ್ಟಿಯಂತೆ ರೈಲುಗಳು ಒಂದು ನಿಮಿಷ ನಿಲುಗಡೆ ಹೊಂದಿರುತ್ತದೆ:

  1. ರೈಲು ಸಂಖ್ಯೆ 16206 ಮೈಸೂರು-ತಾಳಗುಪ್ಪ ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲು ಅಕ್ಕಿಹೆಬ್ಬಾಳುವಿಗೆ ಬೆಳಗ್ಗೆ 06:55 ಕ್ಕೆ ಆಗಮಿಸಿ, 06:56 ಕ್ಕೆ ನಿರ್ಗಮಿಸಲಿದೆ.
  2. ರೈಲು ಸಂಖ್ಯೆ 16205 ತಾಳಗುಪ್ಪ-ಮೈಸೂರು ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲು ಅಕ್ಕಿಹೆಬ್ಬಾಳುವಿಗೆ ರಾತ್ರಿ 09:09 ಕ್ಕೆ ಆಗಮಿಸಿ,09:10 ಕ್ಕೆ ಹೊರಡಲಿದೆ.

ಪ್ರಯಾಣಿಕರು ಈ ತಾತ್ಕಾಲಿಕ ನಿಲುಗಡೆ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹುಬ್ಬಳ್ಳಿ ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Share This Article
error: Content is protected !!
";