ಅಂದು ದೇವೇಗೌಡರು ವಿಶೇಷ ಆರ್ಥಿಕ ವಲಯ ತಂದರು ಇಂದು ಡಿಕೆಶಿ ದರ್ಪ ಮಾಡುತ್ತಾರೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಂದು ಹೆಚ್.ಡಿ ದೇವೇಗೌಡ ಅವರು ಬೆಂಗಳೂರಿನ ಐಟಿಪಿಎಲ್‌ನಲ್ಲಿ ವಿಶೇಷ ಆರ್ಥಿಕ ವಲಯ (SEZ) ಸ್ಥಾಪಿಸಿ, ಐಟಿ ಕ್ಷೇತ್ರದ ಅಭಿವೃದ್ಧಿಗೆ 10 ವರ್ಷ ಉಚಿತ ತೆರಿಗೆ ಘೋಷಿಸಿದರು.

ಆದರೆ ಇಂದು ಡಿ.ಕೆ ಶಿವಕುಮಾರ್ ಅವರು ಅಧಿಕಾರದ ದರ್ಪ, ದುರಂಹಕಾರದಿಂದ ಬೆಂಗಳೂರು ಬಿಟ್ಟು ಹೋಗುವವರು ಹೋಗಬಹುದು ಎಂದು ಉದ್ಯಮಿಗಳಿಗೆ ಧಮ್ಕಿ ಹಾಕುತ್ತಿದ್ದಾರೆ ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ.

- Advertisement - 

ಉದ್ಯಮಿಗಳು ಸಿಲಿಕಾನ್‌ಸಿಟಿಯಲ್ಲಿನ ಗುಂಡಿ ಬಿದ್ದಿರುವ ರಸ್ತೆ, ಕಸದ ಸಮಸ್ಯೆ , ಟ್ರಾಫಿಕ್‌ಜಾಮ್‌ಬಗ್ಗೆ ಧ್ವನಿ ಎತ್ತಿದ್ದಾರೆ. ಬೆಂಗಳೂರಿನ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವ ಬದಲು, ಬ್ಲ್ಯಾಕ್‌ಮೇಲ್‌ಮಾಡಬೇಡಿ ಎಂದು ಕೈಗಾರಿಕೋದ್ಯಮಿಗಳಿಗೆ ಬೆದರಿಸುವ ತಂತ್ರ ಅನುಸರಿಸುತ್ತಿದ್ದೀರಿ.

ನಿಮ್ಮ ಈ ನಡೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಎನ್ನುವುದು ಜಗಜ್ಜಾಹೀರಾಗಿಸಿದೆ. ಪ್ರಸ್ತುತ ನಗರಕ್ಕೆ ಮೂಲ ಸೌಕರ್ಯಗಳನ್ನು ಒದಗಿಸಲು ವಿಫಲವಾಗಿರುವ ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಒಳಿತು ಎಂದು ಜೆಡಿಎಸ್ ಆಗ್ರಹ ಮಾಡಿದೆ.

- Advertisement - 

 

Share This Article
error: Content is protected !!
";