ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿದ್ದರಾಮಯ್ಯ ನೀವು ಕೊಟ್ಟ ಮಾತು ಮರೆತುಬಿಟ್ಟಿದ್ದೀರಿ. ಸ್ವಲ್ಪ ಜ್ಞಾಪಿಸಿಕೊಳ್ಳಿ! ಎಂದು ಜೆಡಿಎಸ್ ತಾಕೀತು ಮಾಡಿದೆ.
ನಿಮ್ಮ ನಾಯಕಿ, ಸಂಸದೆ ಪ್ರಿಯಾಂಕ ಗಾಂಘಿ (ಏಪ್ರಿಲ್30, 2023) ಬೆಳಗಾವಿಯಲ್ಲಿ ನಡೆದ ಸಮಾವೇಶದಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ವೇತನ ಹೆಚ್ಚಳದ 6ನೇ ಗ್ಯಾರಂಟಿ ಘೋಷಣೆ ಮಾಡಿದ್ದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ₹15 ಸಾವಿರ ಮಾಡುವುದಾಗಿ ಘೋಷಿಸಿದ್ದರು. ಆ ಕಾರ್ಯಕ್ರಮದ ವೇದಿಕೆಯಲ್ಲಿ ನೀವು ಸಹ ಉಪಸ್ಥಿತರಿದ್ದೀರಿ. ಆದರೆ, ಚುನಾವಣೆ ಗೆದ್ದ ಬಳಿಕ ಗೋಸುಂಬೆ ಬಣ್ಣ ಬದಲಿಸಿದಂತೆ ಬದಲಾಗಿದ್ದೀರಿ!
ಫ್ರೀಡಂಪಾರ್ಕಿನಲ್ಲಿ ಒಂದು ವಾರದಿಂದ ಚಳಿ, ಬಿಸಿಲು ಲೆಕ್ಕಿಸದೆ ಸಾವಿರಾರು ಕಾರ್ಯಕರ್ತೆಯರು ಕನಿಷ್ಟ ವೇತನಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.
ದಪ್ಪ ಚರ್ಮದ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಇನ್ನಾದರೂ ಆ ನಾರಿಯರ ನ್ಯಾಯಯುತ ಬೇಡಿಕೆಯನ್ನು ಈಡೇರಿಸಬೇಕು ಎಂದು ಜೆಡಿಎಸ್ ಆಗ್ರಹ ಮಾಡಿದೆ.