ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬಾಲಕಿ ಅಪಹರಣ, ಅತ್ಯಾಚಾರ, ಪೊಕ್ಸೋ ಪ್ರಕರಣ ದಾಖಲು ಹಿನ್ನಲೆಯಲ್ಲಿ ಪೋಕ್ಸೋ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ ಜಿಲ್ಲಾ ಕೋರ್ಟ್ ಆದೇಶ ನೀಡಿದೆ.
ಆರೋಪಿ ಪುನೀತ್ ಕುಮಾರ್ ಗೆ ಅಪಹರಣ, ಅತ್ಯಾಚಾರ ಕೇಸಲ್ಲಿ ಜೈಲು ಶಿಕ್ಷೆ ವಿಧಿಸಿದೆ. ಅತ್ಯಾಚಾರಕ್ಕೆ 20 ವರ್ಷ ಕಠಿಣ ಜೈಲು, 25.ಸಾವಿರ ರೂ ದಂಡ. ಅಪಹರಣ ಮಾಡಿದಕ್ಕೆ 7 ವರ್ಷ ಜೈಲು, 5 ಸಾವಿರ ರೂಪಾಯಿ ದಂಡವನ್ನು ನ್ಯಾಯಾಲಯ ಹಾಕಿದೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಬತ್ತಯ್ಯನಹಟ್ಟಿ ಗ್ರಾಮದ ಪುನೀತ್ ಕುಮಾರ್. 2023ರಲ್ಲಿ ನಾಯಕನಹಟ್ಟಿ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲು ಮಾಡಲಾಗಿತ್ತು. ಪೋಕ್ಸೋ ಪ್ರಕರಣ ಸಾಬೀತಾದ ಹಿನ್ನಲೆ ಆರೋಪಿ ಪುನೀತ್ ಕುಮಾರ್ ಗೆ 2ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶ ಮಾಡಿದೆ.
ನ್ಯಾಯಾದೀಶರಾದ ಗಂಗಾಧರಪ್ಪ ಸಿ ಹಡಪದ ರಿಂದ ಶಿಕ್ಷೆ ವಿಧಿಸಿ ಆದೇಶ ಮಾಡಿದ್ದಾರೆ. ಸಂತ್ರಸ್ಥೆ ಪರ SPP (ಪೋಕ್ಸೋ) ಜಗದೀಶ್ ವಾದ ಮಂಡನೆ ಮಾಡಿದ್ದರು. ಇದೇ ಸಂದರ್ಭದಲ್ಲಿ ಸಂತ್ರಸ್ಥ ಬಾಲಕಿಗೆ ಸರ್ಕಾರದಿಂದ 4 ಲಕ್ಷ ಪರಿಹಾರ ನೀಡಲು ಕೋರ್ಟ್ ಆದೇಶ ಮಾಡಿದೆ.