ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ 1000 ದಿನ ಪೂರೈಸಿದೆ ಎಂದು ಸಂಭ್ರಮಿಸುತ್ತಿದೆ. ಆದರೆ ಈ ಸಾವಿರ ದಿನದಲ್ಲಿ ತನ್ನ ಸಾಧನೆ ಶೂನ್ಯ ಎಂಬುದನ್ನು ಕಾಂಗ್ರೆಸ್‌ಮರೆತು ಬಿಟ್ಟಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಸಾವಿರ ದಿನಗಳಲ್ಲಿ ಪಂಚ ಗ್ಯಾರಂಟಿ ಬಿಟ್ಟು ಯಾವುದೇ ಹೊಸ ಯೋಜನೆ ಘೋಷಿಸಿಲ್ಲ, ಅವುಗಳೂ ಸರಿಯಾಗಿ ತಲುಪುತ್ತಿಲ್ಲ, ರಾಜ್ಯದಲ್ಲಿ ಅಭಿವೃದ್ಧಿ ಎನ್ನುವುದು ಕನಸಿನ ಮಾತಾಗಿದೆ, ಬೆಲೆ ಏರಿಕೆಯೇ ಕಾಂಗ್ರೆಸ್‌ಸರ್ಕಾರದ ಅತಿದೊಡ್ಡ ಸಾಧನೆಯಾಗಿದೆ.
ಸಾವಿರ ದಿನಗಳಲ್ಲಿ ಅತ್ಯಂತ ನಿಷ್ಠೆ, ಬದ್ಧತೆ ಮತ್ತು ಕಾಯಕ ತತ್ವದಿಂದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮಾಡಿರುವ ಏಕೈಕ ಕಾರ್ಯ ಎಂದರೆ ಭ್ರಷ್ಟಾಚಾರ, ಅಕ್ರಮ ಮಾತ್ರ! ಎಂದು ಅಶೋಕ್ ಆರೋಪಿಸಿದ್ದಾರೆ.

