ಚಂದ್ರವಳ್ಳಿ ನ್ಯೂಸ್, ಶಿರಾ:
ಮಾಜಿ ಸಂಸದ ದಿವಂಗತ ಸಿ.ಪಿ ಮೂಡಲಗಿರಿಯಪ್ಪನವರು ಲೋಕಸಭಾ ಸಂಸದರಾಗಿ, ಶಿರಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಮಾಡಿದ ಕಾರ್ಯಗಳನ್ನು ಮರೆಯಲು ಸಾಧ್ಯವಿಲ್ಲ ಎಂದು ಅಭಿಮಾನಿಗಳ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಶಿರಾ ತಾಲೂಕಿನ ಚಿರತಹಳ್ಳಿಯ ಗಣೇಶ ಗುಡಿ ಎಸ್ಟೇಟ್(ತೋಟ)ನ ಅವರಣದಲ್ಲಿ ಆಯೋಜಿಸಿದ್ದ ಮೊದಲ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು.
ಮೂಡಲಗಿರಿಯಪ್ಪನವರ ಪ್ರಭುತ್ವದ ಆಡಳಿತ ಅನೇಕರಿಗೆ ಮಾದರಿಯಾಗಿದೆ. ಅವರು ಎಂದೂ ಶಾಸಕ, ಸಂಸದರು ಎಂದು ಗತ್ತು ಮಾಡಲಿಲ್ಲ, ಅಧಿಕಾರ ಚಲಾಯಿಸಲಿಲ್ಲ ಎಂದು ಸ್ಮರಣೆ ಮಾಡಿದರು.
ಸ್ಫಟಿಕಪುರಿ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಮಹಾಸ್ವಾಮೀಜಿಯವರು ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮೂಡಲಗಿರಿಯಪ್ಪನವರ ಆದರ್ಶದ ವಿಚಾರಗಳನ್ನು ಎಳೆಎಳೆಯಾಗಿ ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಚಿತ್ರದುರ್ಗದ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಾಲರಾಜ್, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕರಾದ ಜೆ. ರಾಜು ಬೇತೂರು ಪಾಳ್ಯ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಕೆ ಟಿ ರುದ್ರಮುನಿ, ರೈತ ಮುಖಂಡ ಕೆ.ಸಿ ಹೊರಕೇರಪ್ಪ, ಹಿರಿಯೂರು ತಾಲೂಕಿನ ಒಕ್ಕಲಿಗ ಸಮುದಾಯದ ಮುಖಂಡರುಗಳಾದ ಏಕಾಂತಪ್ಪ ಸೇರಿದಂತೆ ಇನ್ನು ಕೆಲವು ಸಮಾಜಮುಖಿ ಗಣ್ಯ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮೂಡಲಗಿರಿಯಪ್ಪನವರ ಪುತ್ರರು ಹಾಗೂ ಮಾಜಿ ಶಾಸಕ ಡಾ.ಸಿ.ಎಂ ರಾಜೇಶ್ ಗೌಡ ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು ಎಂದು ರಘು ಗೌಡ ತಿಳಿಸಿದ್ದಾರೆ.