ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿಯವರ ಪುಣ್ಯತಿಥಿಯೊಂದು ಭಾವಪೂರ್ಣ ನಮನಗಳು.
ರಾಜೀವ್ ಗಾಂಧಿಯವರು ದೇಶದ ಪ್ರಜಾಸತ್ತಾತ್ಮಕ ಆಡಳಿತದಲ್ಲಿ ಪ್ರಧಾನಮಂತ್ರಿಯಾಗಿ ಆಧುನಿಕ ಭಾರತವನ್ನು ಕಟ್ಟಲು ಕನಸು ಕಾಣುವ ಮೂಲಕ ಅದನ್ನು ನನಸು ಮಾಡಿದ ಮುತ್ಸದ್ಧಿ ರಾಜಕಾರಣಿ, ದೇಶದ ಪ್ರಜಾಪ್ರಭುತ್ವದ ಆಡಳಿತದಲ್ಲಿ ಯುವಜನರು ಹೆಚ್ಚಾಗಿ ಭಾಗಿಯಾಗಬೇಕು ಎಂಬ ಮಹತ್ವದ ಉದ್ದೇಶದ ವಿಚಾರದಲ್ಲಿ ಮತದಾನದ ಹಕ್ಕಿನ ವಯಸ್ಸನ್ನು 21ಕ್ಕೆ ಇದ್ದದ್ದು 18ಕ್ಕೆ ಇಳಿಸಿದರು.
ಇದರಿಂದಾಗಿ ಯುವಕರಿಗೆ ರಾಜಕೀಯ ಜ್ಞಾನ ಹೆಚ್ಚಾಯಿತು. ಯುವಕರು ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನದಾಗಿ ತೊಡಗಿಕೊಳ್ಳಲು ರಾಜೀವ್ ಗಾಂಧಿ ಅವರ ರಾಜಕೀಯ ನೀತಿ ಕಾರಣವಾಗಿದೆ. ಇದಕ್ಕೆ ಸಾಕ್ಷಿ ಗುಡ್ಡೆಯಾಗಿ ಸಾಮಾಜಿಕವಾಗಿ ನಿಂತಿದೆ ಈ ಕಾಲಘಟ್ಟದ ಯುವ ಮುಖಂಡತ್ವದ ಮುಂದಾಳತ್ವ.
ಗ್ರಾಮೀಣ ಪ್ರದೇಶಗಳ ಜನತೆಗೆ ಪ್ರಜಾನೀತಿಯ ಆಡಳಿತ ನೀಡಬೇಕು ಎಂಬ ಮಹತ್ವಾಕಾಂಕ್ಷೆಯ ಉದ್ದೇಶದಿಂದ ಅಧಿಕಾರ ವಿಕೇಂದ್ರೀಕರಣ ಮಾಡಲು ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಆಡಳಿತದ ನೀತಿಯನ್ನು ತಂದರು. ಇದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ನಾಯಕತ್ವದ ಮೌಲ್ಯಗಳು ಹಾಗೂ ಅಭಿವೃದ್ಧಿಗೆ ಹೆಚ್ಚಾಗಿ ಅನುದಾನ ಬಿಡುಗಡೆಗೆ ಸಹಕಾರಿಯಾಗಿದೆ.
ಭಾರತ ದೇಶದಲ್ಲಿ ಮಾಹಿತಿ ತಂತ್ರಜ್ಞಾನ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಬುನಾದಿ ಹಾಕಿಕೊಟ್ಟ ಯುಗ ಪುರುಷರು ಎಂದು ತಿಳಿಸಲು ಇಚ್ಚಿಸುತ್ತೇನೆ ಎಂದು ರಘು ಗೌಡ ತಿಳಿಸಿದ್ದಾರೆ.