ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗ ಜಿಲ್ಲೆ ರಾಜ್ಯದ ಭೂಸುತ್ತಳತೆಯಲ್ಲಿ ಮಧ್ಯಭಾಗದಲ್ಲಿದೆ. ಚಿತ್ರದುರ್ಗ ಐತಿಹಾಸಿಕ ಪರಂಪರೆಯ ಇತಿಹಾಸವನ್ನು ಸಾರುತ್ತದೆ. ಏಳು ಸುತ್ತಿನ ಕಲ್ಲಿನ ಕೋಟೆ ಪಾಳೆಯಗಾರರ ಆಳ್ವಿಕೆಯನ್ನು ಪ್ರತಿಬಿಂಬಿಸುತ್ತದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತವೆ. ಚಿತ್ರದುರ್ಗ ಜಿಲ್ಲಾ ಪ್ರಾಂತ್ಯದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ವಿಚಾರ ಸುದ್ದಿಮಾದ್ಯಮದಲಿ ದೊಡ್ಡ ಸುದ್ದಿಯಾಗಿದೆ ಈ ವಿಚಾರದ ಆಧಾರದಲ್ಲಿಯೇ ನಾನು ಈ ಮಹತ್ವದ ಸುದ್ದಿಯನ್ನು ಮುನ್ನೆಲೆಗೆ ತರುತ್ತಿರುವುದು. ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದ ಜನತೆ ಸೇರಿದಂತೆ ಕರಾವಳಿಯ ಜನತೆ ಚಿತ್ರದುರ್ಗ ಜಿಲ್ಲೆಗೆ ಬರುವುದಕ್ಕೆ ರಸ್ತೆಗಳು ಬಹಳಷ್ಟು ಉತ್ತಮ ಸ್ಥಿತಿಯಲ್ಲಿ ನಿರ್ಮಾಣವಾಗಿದೆ. ವಿಮಾನ ನಿಲ್ದಾಣಕ್ಕೆ ರಸ್ತೆ ಸಂಚಾರ ವ್ಯವಸ್ಥೆ ಬಹು ಮುಖ್ಯವಾದ ವಿಷಯವಾಗಿದೆ.
ಈ ವಿಚಾರದಲ್ಲಿ ಚಿತ್ರದುರ್ಗ ಜಿಲ್ಲಾ ಕೇಂದ್ರದಿಂದ ಬೆಂಗಳೂರು ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 4 ಹಿರಿಯೂರು ತಾಲ್ಲೂಕಿನ ಐಮಂಗಳ ಟೋಲ್ ಸಮೀಪದಲ್ಲಿ ಭೂಪ್ರದೇಶವು ಬಹಳಷ್ಟಿದೆ ಈ ಭಾಗದಲ್ಲಿ ವಿಮಾನ ನಿಲ್ದಾಣ ಮಾಡುವುದು ಸೂಕ್ತವಾಗಿದೆ.
ಈ ವಿಚಾರದಲ್ಲಿ ತಂತ್ರಜ್ಞಾನದ ಅಭಿಪ್ರಾಯವು ಉತ್ತಮವಾಗಿದೆ. ಕಳೆದ ಶುಕ್ರವಾರ ರಾಜ್ಯಸರ್ಕಾರದ 2025ರ ಬಜೆಟ್ ಅಧಿವೇಶನದ ಕೊನೆಯ ದಿನದಲ್ಲಿ ಚಳ್ಳಕೆರೆ ವಿಧಾನಸಭಾ ಶಾಸಕರಾದ ಶ್ರೀ ರಘುಮೂರ್ತಿ ಅವರು ಚಿತ್ರದುರ್ಗ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ವಿಚಾರ ಸುದೀರ್ಘವಾಗಿ ಚರ್ಚಿಸಿ ಈ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ ಈ ವಿಚಾರದಲ್ಲಿ ಅವರನ್ನು ಅಭಿನಂದಿಸುತ್ತೇನೆ ಎಂದು ರಘು ಗೌಡ ತಿಳಿಸಿದ್ದಾರೆ.