ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪುರಸ್ಕೃತ ಹೆಂಜಾರಪ್ಪ ಇವರನ್ನ ಸನ್ಮಾನಿಸಿದ ಕುಂಚಿಟಿಗ ಸರ್ಕಾರಿ ನೌಕರರ ಸಂಘ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಮಾಧ್ಯಮ ಅಕಾಡೆಮಿಯ ವತಿಯಿಂದ ಭಾರತೀಯ ವಿಜ್ಞಾನ ಸಂಸ್ಥೆಯ ಜಿ.ಎನ್. ಟಾಟಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 2023 ಮತ್ತು 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಕರ್ನಾಟಕ ರಾಜ್ಯ ಸರ್ಕಾರಿ ಕುಂಚಿಟಿಗ ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಕರ್ನಾಟಕ ರಾಜ್ಯ ಕುಂಚಿಟಿಗ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ವಿತ್ರಾಂತ ಅಪರ ಜಿಲ್ಲಾಧಿಕಾರಿ ಎಸ್.ಕೆ.ಲಕ್ಷ್ಮಣ್ ಮಾತನಾಡಿ ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ವಾರ್ಷಿಕ ಪ್ರಶಸ್ತಿಗೆ ಪುರಸ್ಕೃತರಾದ ಹರಿಯಬ್ಬೆ ಹೆಂಜಾರಪ್ಪ ಅವರಿಗೆ ಪ್ರಶಸ್ತಿ ಲಭ್ಯವಾಗಿರುವುದು ಇಡೀ ಸಮಾಜಕ್ಕೆ ಸಂದ ಗೌರವವಾಗಿದೆ. ಪ್ರಶಸ್ತಿ ಲಭ್ಯವಾಗಿರುವುದು ಸಂತೋಷದ ವಿಚಾರ ಎಂದು ತಿಳಿಸಿದರು.

ಸಂಘದ ಗೌರವಾಧ್ಯಕ್ಷರು ಹಾಗೂ ಕುಂಚಿಟಿಗ ಸಮಾಜದ ಹಿರಿಯ ಮುಖಂಡರಾದ ಡಾ.ಎಂ.ಜಿ.ಗೋವಿಂದಯ್ಯ ಮಾತನಾಡಿ ಮಾಧ್ಯಮ ಕ್ಷೇತ್ರದಲ್ಲಿ 25 ವರ್ಷಗಳಿಗೂ ಹೆಚ್ಚಿನ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ ಹೆಂಜಾರಪ್ಪ ಸರ್ಕಾರ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. ಇದರಿಂದ ಬಹಳ ದೊಡ್ಡ ಜವಾಬ್ದಾರಿ ಇವರ ಮೇಲಿದೆ ಎಂದು ತಿಳಿಸಿದರು.

ಇವರು ಸಮಾಜಮುಖಿ ಬರವಣಿಗೆ, ವರದಿಗಳ ಮೂಲಕ ಜನರ ದನಿಯಾಗಿ ಕೆಲಸ ಮಾಡಿದ್ದಾರೆ. ಪತ್ರಕರ್ತರಾಗಿ ಹೆಂಜಾರಪ್ಪ ಅವರು 25 ವರ್ಷಗಳಿಂದ ಪತ್ರಿಕಾ ರಂಗದ ಪರಿಶ್ರಮಕ್ಕೆ ತಕ್ಕ ಪ್ರಶಸ್ತಿಗೆ ಭಾಜನರಾಗಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.

ವಿಶ್ರಾಂತ ಎಸಿಪಿ ಶ್ರೀನಿವಾಸ್ ಮೂರ್ತಿ, ಸಮಾಜ ಸೇವಕ, ಅಖಿಲ ಕುಂಚಿಟಿಗ ಮಹಾಮಂಡಲದ ಮಾಜಿ ರಾಜ್ಯಾಧ್ಯಕ್ಷ ಕೆ.ಬಸವಾನಂದ, ಸಮಾಜದ ಮುಖಂಡರಾದ ಹೆಚ್. ಮಂಡೇರ ಸತೀಶ್ ಕುಮಾರ್, ಇಂಜಿನಿಯರ್ ಎನ್.ಎಂ ಗೌಡ, ಎನ್.ಕೆ.ಅನಿತ ಹೆಂಜಾರಪ್ಪ ಸೇರಿದಂತೆ ಮತ್ತಿತರರು ಇದ್ದರು.

- Advertisement -  - Advertisement -  - Advertisement - 
Share This Article
error: Content is protected !!
";