ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಶಾಸಕರಾಗಿದ್ದಾಗ ಚನ್ನಪಟ್ಟಣ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಬಾಬಾ ಸಾಹೇಬ್‌ಡಾ. ಬಿ.ಆರ್. ಅಂಬೇಡ್ಕರ್‌ಭವನ ಮತ್ತು ಡಾ. ಬಾಬು ಜಗಜೀವನ್‌ರಾಂ ಭವನಗಳ ನಿರ್ಮಾಣಕ್ಕೆ 5 ಕೋಟಿ ರೂ. ಅನುದಾನ ತಂದಿದ್ದರು.
ಆದರೆ ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ಬಂದ ಆ ಹಣವನ್ನು ರದ್ದುಪಡಿಸಿ ಎಂದು ಸರ್ಕಾರಕ್ಕೆ ಪತ್ರ ಬರೆದು ದಲಿತರ ವಿರೋಧಿ ಮನಸ್ಥಿತಿಯನ್ನು ತೋರಿಸಿದ್ದೀರಿ ಸಿಪಿ ಯೋಗೇಶ್ವರ್ ಎಂದು ಜೆಡಿಎಸ್ ಆರೋಪಿಸಿದೆ.
ಈಗ ಅದ್ಯಾವ ಮುಖ ಇಟ್ಟುಕೊಂಡು ದಲಿತರ ಬಳಿ ವೋಟು ಕೇಳುತ್ತೀರಿ..?
ವಾಲ್ಮೀಕಿ ಹಗರಣ, ಪರಿಶಿಷ್ಟರ ಅಭಿವೃದ್ಧಿ ಹಣಲೂಟಿ ಹೊಡೆದಿರುವ ಕಾಂಗ್ರೆಸ್‌ಸರ್ಕಾರ ಮತ್ತು ಕಾಂಗ್ರೆಸ್‌ಪಕ್ಷ ದಲಿತರನ್ನು ಕೇವಲ ಮತಬ್ಯಾಂಕ್‌ಆಗಿ ಬಳಸಿಕೊಂಡು ವಂಚಿಸುತ್ತಲೇ ಬಂದಿದೆ. ಆ ಪಕ್ಷ ಸೇರಿದ ನಿಮ್ಮದು ಅಂತಹದ್ದೇ ಮನಸ್ಥಿತಿ ಎಂದು ಜೆಡಿಎಸ್ ಟೀಕಿಸಿದೆ.