ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವೇತನ ಸಿಗದೆ ಕಲಬುರಗಿಯ ಗ್ರಂಥಪಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುರಿತು ವಿಪಕ್ಷ ನಾಯಕ ಆರ್.ಅಶೋಕ್ ತೀವ್ರ ವಾಗ್ದಾಳಿ ಮಾಡಿದ್ದಾರೆ.
ಬಿಲ್ ಪಾವತಿ ಆಗದಿದ್ದಕ್ಕೆ ಕಂಟ್ರಾಕ್ಟರ್ ಗಳ ಆತ್ಮಹತ್ಯೆ. ವರ್ಗಾವಣೆ, ಕಮಿಷನ್ ದಂಧೆಗೆ ಪೊಲೀಸರು, ಸರ್ಕಾರಿ ಅಧಿಕಾರಿಗಳ ಆತ್ಮಹತ್ಯೆ.
ಸಕಾಲಕ್ಕೆ ನೆರೆ, ಬರ ಪರಿಹಾರ ಸಿಗದೆ ರೈತರ ಆತ್ಮಹತ್ಯೆ. ನಿಗಮ ಮಂಡಳಿಗಳಿಂದ ಸಾಲ ಸಿಗದೆ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಸಿಲುಕಿ ಬಡವರ ಆತ್ಮಹತ್ಯೆ.
ಈ ಮನೆಹಾಳು ಕರ್ನಾಟಕ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ದಿವಾಳಿ ಮಾಡಿ ಜನಸಾಮಾನ್ಯರಿಗೆ ಆತ್ಮಹತ್ಯೆ ಭಾಗ್ಯ, ಸಾವು ಗ್ಯಾರೆಂಟಿ ನೀಡುತ್ತಿದೆ.
ಈ ಕೊಲೆಗಡುಕ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ! ಎಂದು ಅಶೋಕ್ ಟೀಕಿಸಿದ್ದಾರೆ.

