ದಾದಾ ಸಾಹೇಬ್ ಕಾನ್ಷಿರಾಂ ಅವರ ಜನ್ಮಾಚರಣೆ 

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರದ ಪ್ರವಾಸಿ ಮಂದಿರದಲ್ಲಿ ಮಾನ್ಯವಾರ್ ದಾದಾ ಸಾಹೇಬ್ ಕಾನ್ಷಿರಾಂ ರವರ 91ನೇ ಜನ್ಮದಿನಾಚರಣೆ ಆಚರಿಸಲಾಯಿತು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ್ಯಾಡರಹಳ್ಳಿ ಹನುಮಂತರಾಯ ಮಾತನಾಡಿ  ದೇಶದಲ್ಲಿ ಮೊಟ್ಟಮೊದಲಿಗೆ ಬಹುಜನರು, ಶೋಷಿತರು ಅಧಿಕಾರವನ್ನು ಪಡೆಯಬೇಕು ಎಂಬ ಬಾಬಾ ಸಾಹೇಬ ಅಂಬೇಡ್ಕರ್ ರವರ ಕನಸನ್ನು ನನಸು ಮಾಡಿ ಉತ್ತರ ಪ್ರದೇಶದಲ್ಲಿ  ಬಹುಜನರನ್ನು ಅಧಿಕಾರಕ್ಕೆ ತಂದ ಕೀರ್ತಿ ಕಾನ್ಷಿರಾಂ ಅವರಿಗೆ ಸಲ್ಲುತ್ತದೆ.

ಅದೇ ರೀತಿ ಕರ್ನಾಟಕ ರಾಜ್ಯದಲ್ಲಿ ಬಹುಜನರನ್ನು ಜಾಗೃತಿಗೊಳಿಸಿ ಸಂಘಟನೆ ಮಾಡಿ ಅಧಿಕಾರ ಪಡೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಯೋಜಕ ಕೆಪಿ ಶ್ರೀನಿವಾಸ್, ಜಿಲ್ಲಾ ಉಪಾಧ್ಯಕ್ಷರಾದ ದೇವೇಗೌಡ
, ಮಹಾಲಿಂಗಪ್ಪ ಉಪ್ಪಳಗೆರೆ, ತಾಲ್ಲೂಕು ಉಸ್ತುವಾರಿ ರಾಘವೇಂದ್ರ ಈಶ್ವರಗೆರೆ, ತಾಲ್ಲೂಕು ಸಂಯೋಜಕ ನರಸಿಂಹಮೂರ್ತಿ (ಬಾಬಣ್ಣ),

ತಾಲ್ಲೂಕು ಅಧ್ಯಕ್ಷ ಎಂ ಜಗದೀಶ್, ತಾಲ್ಲೂಕು ಉಪಾಧ್ಯಕ್ಷ ಚಂದ್ರಣ್ಣ , ಪ್ರಧಾನ ಕಾರ್ಯದರ್ಶಿ ಎಂ ಡಿ ಕೋಟೆ ಪರಮೇಶ್ವರಪ್ಪ, ಖಜಾಂಚಿ ರಂಗಸ್ವಾಮಿ ಹುಚ್ಚವ್ವನಹಳ್ಳಿ, ಕಾರ್ಯದರ್ಶಿ ಕದುರಪ್ಪ ಶಿಡ್ಲಯ್ಯನಕೋಟೆ, ಮಹೇಶ್ ಕಾಟನಾಯಕನಹಳ್ಳಿ, ಸೀಗೆಹಟ್ಟಿ ರಂಗನಾಥ್, ಮುಖಂಡರಾದ ಬೋರನಕುಂಟೆ ಕರಿಯಣ್ಣ, ರಂಗಸ್ವಾಮಿ ಪಿಟ್ಲಾಲಿ, ಓಂಕಾರ್ ಮಸ್ಕಲ್ ಮಟ್ಟಿ, ಮಾರುತೇಶ್ ಕೂನಿಕೆರೆ ಉಪ‌‌ಸ್ಥಿತರಿದ್ದರು.

 

 

- Advertisement -  - Advertisement - 
Share This Article
error: Content is protected !!
";