ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶ್ರೀಲಂಕಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನೇಪಾಳವನ್ನು ಬಗ್ಗುಬಡಿದು ಚೊಚ್ಚಲ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡ ಭಾರತದ ಅಂಧ ಮಹಿಳೆಯರ ತಂಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ದೇಶಾದ್ಯಂತ ವ್ಯಾಪಕ ಅಭಿನಂದನೆಗಳು ಹರಿದು ಬಂದಿವೆ.
ದೈಹಿಕ ಸವಾಲನ್ನು ಮೆಟ್ಟಿನಿಂತು ಭಾರತದ ಅಂಧ ಮಹಿಳಾ ತಂಡ ಮಾಡಿರುವ ಸಾಧನೆ ಕೋಟ್ಯಂತರ ದೇಶವಾಸಿಗಳಿಗೆ ಹೆಮ್ಮೆ ಮತ್ತು ಸ್ಪೂರ್ತಿಯಾಗಿದೆ. ಸಮಸ್ತ ಭಾರತೀಯರ ಪಾಲಿಗೆ ಇದೊಂದು ಐತಿಹಾಸಿಕ ದಿನ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

