ರೀಲ್ಸ್ ಮಾಡಲು ಹೋಗಿ ರೆಡ್ಡಿ ಮನೆಗೆ ಬೆಂಕಿ ಹಚ್ಚಿರುವ ಹುಡುಗರು: ಎಸ್ಪಿ

News Desk
- Advertisement -  - Advertisement -  - Advertisement - 

ರೀಲ್ಸ್ ಮಾಡಲು ಹೋಗಿ ರೆಡ್ಡಿ ಮನೆಗೆ ಬೆಂಕಿ ಹಚ್ಚಿರುವ ಹುಡುಗರು: ಎಸ್ಪಿ

ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:                                     ನಗರದ ಬೆಳಗಲ್ಲು ರಸ್ತೆಯಲ್ಲಿನ ಜಿ.ಸ್ಕ್ವೆಯರ್ ಲೇ ಔಟ್ ನಲ್ಲಿನ ಜನಾರ್ಧನರೆಡ್ಡಿಯವರಿಗೆ ಸೇರಿದ ಮನೆಗೆ ಬೆಂಕಿ ಹಚ್ಚಿದ್ದು ರೀಲ್ಸ್ ಮಾಡಲು ಹೋದ ಹುಡುಗರು. ಈ ಸಂಬಂಧ ಎಂಟು ಜನರನ್ನು ಬಂಧಿಸಿದೆ ಎಂದು ಎಸ್ಪಿ ಡಾ.ಸುಮನ್ ಡಿ ಪೆನ್ನೆಕರ್ ಹೇಳಿದ್ದಾರೆ.

- Advertisement - 

ಸ್ಥಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು. ಯುವಕರ ಗುಂಪು ರೀಲ್ಸ್ ಹಾಗೂ ಪೋಟೋ ಶೂಟ್ ಮಾಡಲು ಬಂದು ಈ ಕೃತ್ಯ ಎಸಗಿದೆಂದು ಪ್ರಾಥಮಿಕ ತನಿಖೆಯಲ್ಲಿ ನಮಗೆ ತಿಳಿದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಎಂಟು ಜನರನ್ನು ವಶಕ್ಕೆ ಪಡೆದಿದ್ದೇವೆ.ಅವರಲ್ಲಿ ಆರು‌ ಜನ ಅಪ್ರಾಪ್ತರು.ಇಬ್ಬರು ಮೇಜರ್ ಇದ್ದಾರೆ.ವಶಕ್ಕೆ ಪಡೆದವರ ಮೊಬೈಲ್ ನಲ್ಲಿ ನಮಗೆ ರೀಲ್ಸ್ ಹಾಗು ಪೋಟೋ ಶೂಟ್ ಮಾಡಿರುವ ಸಾಕ್ಷಿ ಸಿಕ್ಕಿವೆ. ಮನೆಯ ಮೇಲ್ಛಾವಣಿಗೆ (ರೂಫ್‌ಟಾಪ್) ತೆರಳಿದ್ದಾರೆ. ಈ ಪ್ರಕ್ರಿಯೆಯಲ್ಲಿ, ತಮ್ಮ ಕೃತ್ಯಗಳ ಗಂಭೀರತೆ ಮತ್ತು ಪರಿಣಾಮಗಳನ್ನು ಅರಿಯದೆ, ಗುಂಪಿನ ಇಬ್ಬರು ಯುವಕರು ಈ ಬೆಂಕಿ ಹಚ್ಚಿದ್ದು, ಅದು ನಂತರ ದೊಡ್ಡ ಮಟ್ಟದ ಅಗ್ನಿ ಅವಘಡಕ್ಕೆ ಕಾರಣವಾಗಿದೆ ಎಂದಿದ್ದಾರೆ.
ಬೆಂಕಿಗೆ ಆಹುತಿಯಾದ ಈ ಮನೆ ಅನೇಕ ವರ್ಷಗಳಿಂದ ಹಾಳು ಬಿದ್ದಿತ್ತು.ಮನೆಗೆ ಸೆಕ್ಯೂರಿಟಿ ಇಲ್ಲ, ಸಿಸಿ ಟಿವಿ ಇಲ್ಲ. ಇದರಲ್ಲಿ ಫ್ರಿಡ್ಜ್, ಟಿವಿ, ಸೋಫಾ ಏನು ಇರಲಿಲ್ಲ.ನಾವಿನ್ನೂ ಆಳವಾಗಿ ತನಿಖೆ ಮಾಡುತ್ತಿದ್ದೇವೆ. ಸದ್ಯಕ್ಕೆ ಇದನ್ನು ಉದ್ದೇಶಪೂರ್ವಕವಾಗಿ ಮಾಡಿಲ್ಲ ಅನ್ನೋದು ಗೊತ್ತಾಗಿದೆ ಎಂದಿದ್ದಾರೆ.

- Advertisement - 

ಬಂಧಿತ ಆರೋಪಿಗಳು:
ನಗರದ ಕೌಲ್ ಬಜಾರ್ ನ ಟೇಲರ್ ಬೀದಿಯ ಸೋಹೈಲ್ ಅಲಿಯಾಸ್ ಸಾಹಿಲ್ (18), ಉದ್ಯೋಗ: ಲೇಡೀಸ್ ಬುಟಿಕ್ ಕೆಲಸ. ಅಸ್ತಮ್ @ ಸುರೇಶ್, (32), ಉದ್ಯೋಗ ಫ್ಯಾನ್ಸಿ ಸ್ಟೋರ್, ಉಳಿದ ಆರು ಮಂದಿ ಬಾಲಕರಾಗಿದ್ದಾರೆ.

Share This Article
error: Content is protected !!
";