ಮೆಡಿಕಲ್ ಮಾಫಿಯಾಗೆ ಅವಕಾಶ ನೀಡಲು ಜನೌಷಧಿ ಕೇಂದ್ರಗಳ ಸ್ಥಗಿತ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೆಡಿಕಲ್ ಮಾಫಿಯಾಗೆ ಅವಕಾಶ ನೀಡಲು, ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಲೂಟಿಕೋರ ನೀತಿಯಿಂದ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳು ಸಿಗುತ್ತಿಲ್ಲ.! ಎಂದು ಬಿಜೆಪಿ ದೂರಿದೆ.

ಪಿಎಂ ಮೋದಿ ಸರ್ಕಾರದ ಜನೌಷಧಿ ಕೇಂದ್ರಗಳು ಬಡವರ ಪಾಲಿಗೆ ಸಂಜೀವಿನಿ ಕೇಂದ್ರಗಳಾಗಿದ್ದವು ಆದರೆ, ಸಿದ್ದರಾಮಯ್ಯ ನವರ ಸರ್ಕಾರ ಅವುಗಳಿಗೆ ಬೀಗ ಜಡಿದ ಮೇಲೆ ಬಡವರಿಗೆ ದಿಕ್ಕಿಲ್ಲದಂತಾಗಿದೆ.!

- Advertisement - 

ಘನಂದಾರಿ ಟ್ರೋಲ್ ಮಿನಿಸ್ಟರ್ ಪ್ರಿಯಾಂಕ್ ಖರ್ಗೆ ಅವರ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕನಿಷ್ಠ ಔಷಧಿಗಳು ಸಿಗುತ್ತಿಲ್ಲ.! ಪ್ರತಿಯೊಂದು ಹೊರಗಡೆಯಿಂದ ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.

ಬಡವರ ರಕ್ತಹೀರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ, ರೋಗಿಗಳ ಆರ್ತನಾದ ತಮಗೆ ಕೇಳುತ್ತಿಲ್ಲವೇ.? ಮೆಡಿಕಲ್ ಮಾಫಿಯಾದಿಂದ ಜೇಬು ತುಂಬಿಸಿಕೊಳ್ಳುವಲ್ಲಿ ಬ್ಯುಸಿಯಾಗಿ ಇಲಾಖೆ ಮರೆತು ಬಿಟ್ಟಿರಾ.? ಸಮಸ್ಯೆ ಆಲಿಸದಷ್ಟು ಮೈಮರೆವು ಯಾಕೆ ಸ್ಪಷ್ಟಪಡಿಸುವಿರಾ? ಎಂದು ಬಿಜೆಪಿ ಪ್ರಶ್ನಿಸಿದೆ.

- Advertisement - 

 

 

 

Share This Article
error: Content is protected !!
";