ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲೂಕಿನ ಸಿದ್ದಾಪುರ ಗ್ರಾಮದ ಅಡಿಕೆ ವ್ಯಾಪಾರಿ ಸೂಸೈಡ್ ಪ್ರಕರಣದ ಕಾರಣ ಅವರು ಬರೆದಿಟ್ಟಿರುವ ಡೆತ್ ನೋಟ್ ನಲ್ಲಿ ಬಹಿರಂಗವಾಗಿದೆ. ಸಿದ್ದಾಪುರದ ಅಡಿಕೆ ವ್ಯಾಪಾರಿ ಮೃತ ಶೈಲೇಶ್ ಅವರು ಸಾವಿಗೂ ಮುನ್ನ ಬರೆದಿಟ್ಟಿರುವ ಡೆತ್ ನೋಟ್ ನಲ್ಲಿ ಸೂಸೈಡ್ ಸಿಕ್ರೇಟ್ ಬಹಿರಂಗವಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಪ್ತನಿಂದ ಕೋಟಿ ಕೋಟಿ ಮೋಸ ವಂಚನೆಯೇ ಅಮಾಯಕ ಅಡಿಕೆ ವ್ಯಾಪಾರಿ ಸಾವು ಕಂಡಿದ್ದಾರೆ ಎನ್ನಲಾಗಿದೆ. ಹಾಸನ ಮೂಲದ ಅಡಿಕೆ ವ್ಯಾಪಾರಿ ಉದಯ್ ಶೆಟ್ಟಿಯಿಂದ 6 ಕೋಟಿ, 60 ಲಕ್ಷ ರೂ.ಗಳು ಮೃತ ಶೈಲೇಶ್ ಅವರಿಗೆ ನೀಡಬೇಕಾಗಿದ್ದು ಅವರು ದೊಡ್ಡ ಮೊತ್ತ ನೀಡದೇ ವಂಚನೆ ಮಾಡಿದ್ದರಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಮೃತ ಶೈಲೇಶ್ ಸಹೋದರ ಸಂತೋಷ್ ಅವರು ನನ್ನ ಸಹೋದರನಿಗೆ 6.60 ಕೋಟಿ ವಂಚಿಸಿರುವ ಆರೋಪಿ ಉದಯ್ ಶೆಟ್ಟಿಯನ್ನು ಕೂಡಲೇ ಬಂಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ರಾಜಕೀಯ ಪ್ರಭಾವ, ಹಣ ಬಲ ಆತನಿಗೆ ಇದೆ, ಕೂಡಲೇ ಬಂಧಿಸಬೇಕು. FIR ದಾಖಲಿಸದಂತೆ ನಮ್ಮ ಮೇಲೂ ಒತ್ತಡ ಹಾಕಲಾಯ್ತು. ಮುಂದೆ ಯಾವುದೇ ವರ್ತಕರಿಗೆ ಈ ರೀತಿಯ ಮೋಸ ಆಗಬಾರದು ಎನ್ನುವ ಕಾರಣಕ್ಕೆ ದೂರು ನೀಡಿ FIR ಮಾಡಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ನಮ್ಮ ಅಣ್ಣ ಹಣ ಕೇಳಲು ಹೋದಾಗ ಬೈದು ಕಳಿಸಿದ್ದಾರೆ. ಅದರಿಂದ ಮನನೊಂದು ಡೆತ್ ನೋಟ್ ಬರೆದು ಶೈಲೇಶ್ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಎಫ್ಐಆರ್ ದಾಖಲಾಗುತ್ತಿದ್ದಂತೆ ಆರೋಪಿ ವಂಚಕ ಉದಯ ಶೆಟ್ಟಿ ಪರಾರಿ ಆಗಿದ್ದು ಕೂಡಲೇ ಬಂಧಿಸಬೇಕು ಎಂದು ಸಹೋದರ ಸಂತೋಷ್ ಒತ್ತಾಯಿಸಿದ್ದಾರೆ.