ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮಧ್ಯ ಕರ್ನಾಟಕದ ಏಕೈಕ ರೈತರ ಜೀವನಾಡಿ ವಾಣಿವಿಲಾಸ ಜಲಾಶಯದ ನೀರಿನ ಮಟ್ಟ ಸೋಮವಾರದಿಂದ ನೀರಿನ ಒಳ ಹರಿವು ಸ್ಥಗಿತವಾಗಿದೆ.
ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಕಳೆದೊಂದು ತಿಂಗಳಿನಿಂದ ಭದ್ರಾ ಜಲಾಶಯದಿಂದ ಪ್ರತಿ ದಿನ 462 ಕ್ಯೂಸೆಕ್ ನೀರಿನ ಒಳ ಹರಿವು ಬರುತ್ತಿತ್ತು. ಭದ್ರಾ ಡ್ಯಾಂ ಕೂಡ ಭರ್ತಿಯಾಗಿದ್ದು ಹೆಚ್ಚುವರಿ ನೀರು ಹರಿದು ಹಳ್ಳ ಸೇರುತ್ತಿದೆ.
ಡ್ಯಾಂನಲ್ಲಿ ಹೆಚ್ಚಿನ ನೀರು ಇರುವುದರಿಂದ ಇನ್ನೂ 2 ಟಿಎಂಸಿ ಅಷ್ಟು ನೀರನ್ನು ಲಿಫ್ಟ್ ಮಾಡಿ ವಿವಿ ಸಾಗರಕ್ಕೆ ಹರಿಸಿದರೆ ವಿವಿ ಸಾಗರ ಡ್ಯಾಂ ಈ ವರ್ಷವೂ ಭರ್ತಿಯಾಗುತ್ತಿತ್ತು. ಅತ್ತ ಎತ್ತಿನಹೊಳೆಯ ನೀರು ಬರುತ್ತಿಲ್ಲ. ಇತ್ತ ಭದ್ರಾ ಡ್ಯಾಂ ನೀರು ವಿವಿ ಸಾಗರಕ್ಕೆ ಹರಿಯುತ್ತಿಲ್ಲ.
ತರೀಕೆರೆ ಸಮೀಪದ ಬೆಟ್ಟದ ತಾವರೆಕೆರೆಯ ಪಂಪ್ ಹೌಸ್ ನಿಂದ ಪಂಪ್ ರನ್ ಮಾಡಿ ಲಿಫ್ಟ್ ಮಾಡಲು ಅಧಿಕಾರಿಗಳು, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಸೂಕ್ತ ಕ್ರಮ ಜರುಗಿಸಬೇಕಾಗಿದೆ.
ಜೂನ್- ತಿಂಗಳಿಂದ ಅಕ್ಟೋಬರ್-15ರ ತನಕ ಭದ್ರಾ ಡ್ಯಾಂ ನಿಂದ ನೀರು ಹರಿಸಲು ಆದೇಶವಾಗಿದೆ. ಆದರೆ ಜೂನ್-15 ರಿಂದ ನೀರನ್ನು ಲಿಫ್ಟ್ ಮಾಡಿಲ್ಲ, ಅಲ್ಲದೆ ಹಲವು ಕಾರಣಗಳನ್ನು ನೀಡಿ ಅವದಿಯ ಮಧ್ಯದಲ್ಲಿ ನೀರು ಹರಿಸಿಲ್ಲ. ಹಾಗಾಗಿ ಇಡೀ ವರ್ಷ ಭದ್ರಾ ಡ್ಯಾಂನಿಂದ ವಿವಿ ಸಾಗರಕ್ಕೆ ನೀರು ಹರಿಸಲು ಆದೇಶ ಮಾಡಬೇಕಾಗಿದೆ.
ಈ ಕುರಿತು ಭದ್ರಾ ಮೇಲ್ದಂಡೆ ಮುಖ್ಯ ಇಂಜಿನಿಯರ್ ಲಮಣಿ ಅವರನ್ನು ಪತ್ರಿಕೆ ಎರಡು ಸಲ ಪೋನ್ ಮಾಡಿದ್ದು ಅವರು ಕರೆಯನ್ನು ಸ್ವೀಕರಿಸಿ ಮಾತನಾಡಿಲ್ಲ.
ಇನ್ನು ವಾಣಿ ವಿಲಾಸ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ ಒಟ್ಟು 135 ಅಡಿ ಆಗಿದ್ದು, 130 ಅಡಿಗೆ ಕೋಡಿ ಹರಿಯಲಿದೆ. ಜಲಾಶಯದಲ್ಲಿ 30 ಟಿಎಂಸಿ ಅಡಿ ನೀರು ಸಂಗ್ರಹವಾಗುವ ಸಾಮರ್ಥ್ಯ ಹೊಂದಿದೆ.