ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಕೊಬ್ಬರಿ ಬೆಂಬಲ ಬೆಲೆ 420 ರೂ. ಹೆಚ್ಚಳ ಮಾಡಿ ಅನ್ನದಾತರಿಗೆ ವರ್ಷದ ಆರಂಭಕ್ಕೂ ಮುನ್ನ ಗಿಫ್ಟ್‌ನೀಡಿದೆ ಎಂದು ಬಿಜೆಪಿ ಹರ್ಷ ವ್ಯಕ್ತ ಪಡಿಸಿದೆ.
ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 2025ನೇ ಋತುವಿಗೆ ಕೊಬ್ಬರಿ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸುಲು ಶುಕ್ರುವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮತಿ ನೀಡಿದೆ.
ಈ ಮೂಲಕ ಕ್ವಿಂಟಲ್‌ಉಂಡೆ ಕೊಬ್ಬರಿಗೆ 12,100 ರೂ. ಮತ್ತು ಹೋಳಾದ ಕೊಬ್ಬರಿಗೆ 11,582 ರೂ. ಬೆಂಬಲ ಬೆಲೆ ನಿಗದಿ ಮಾಡಲಾಗಿದೆ ಎಂದು ಬಿಜೆಪಿ ತಿಳಿಸಿದೆ.