ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಬಾರ್ಡ್ ನೆರವನ್ನು 58% ಕಡಿತಗೊಳಿಸುವ ಮೂಲಕ ನಾಡಿನ ರೈತರ ಬೆನ್ನಿಗೆ ಚೂರಿ ಹಾಕಿದ ಕೇಂದ್ರ ಬಿಜೆಪಿ ಸರ್ಕಾರ!ದ ವಿರುದ್ಧ ಕಾಂಗ್ರೆಸ್ ಟೀಕಿಸಿದೆ.
2023–24ನೇ ಸಾಲಿನಲ್ಲಿ ನಬಾರ್ಡ್₹5,600 ಕೋಟಿ ಮಂಜೂರು ಮಾಡಿತ್ತು. ಆದರೆ ಈ ವರ್ಷ ಕೇವಲ ₹2,340 ಕೋಟಿ ಮಾತ್ರ ಮಂಜೂರು ಮಾಡಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಸಾಲದ ಮೊತ್ತವನ್ನು ಶೇ 58ರಷ್ಟು ಇಳಿಕೆಯಾಗಿದ್ದು, ಇದು ಅನ್ನದಾತರಿಗೆ ಎಸಗಿದ ದ್ರೋಹ.
ರಾಜ್ಯದಲ್ಲಿ ಕೃಷಿ ಚಟುವಟಿಕೆಗಳು ಈಗಾಗಲೇ ಚುರುಕುಗೊಂಡಿದ್ದು, ವ್ಯವಸಾಯಕ್ಕೆ ಸಂಬಂಧಿಸಿದ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ಖರೀದಿಗೆ ಹಣಕಾಸಿನ ಅಗತ್ಯವಿದೆ.
ನಬಾರ್ಡ್‌ನಿಂದ ರಿಯಾಯಿತಿ ಬಡ್ಡಿ ದರದ ಕೃಷಿ ಸಾಲ ಮಿತಿ ಗಣನೀಯವಾಗಿ ಕಡಿಮೆ ಆಗಿರುವುದರಿಂದ ರೈತರಿಗೆ ಅವಶ್ಯವಾದ ಸಾಲ ಸೌಲಭ್ಯಕ್ಕೆ ಸಂಪನ್ಮೂಲದ ಕೊರತೆ ಉಂಟಾಗಲಿದೆ ಎಂದು ಕಾಂಗ್ರೆಸ್ ಆತಂಕ ವ್ಯಕ್ತ ಪಡಿಸಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ 5 ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡುತ್ತಿದೆ ಹಾಗೂ 15 ಲಕ್ಷದವರೆಗೆ ಶೇಕಡಾ 3% ದರದಲ್ಲಿ ಸಾಲ ನೀಡುತ್ತಿದೆ. ಆದರೆ ಕೇಂದ್ರ ಸರ್ಕಾರ ಮಾತ್ರ ರಾಜ್ಯದ ರೈತರ ನೆರವಿಗೆ ಬಾರದೆ ವಂಚಿಸುತ್ತಿದೆ ಎಂದು ಕಾಂಗ್ರೆಸ್ ವಾಗ್ದಾಳಿ ಮಾಡಿದೆ.