ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಅಭಿವೃದ್ಧಿ ಮರೆತು ಸದಾ ಕಾಲ ಕುರ್ಚಿ ಕಾದಾಟದಲ್ಲಿ ಮಗ್ನವಾಗಿರುವ ರೈತ ವಿರೋಧಿ ಕಾಂಗ್ರೆಸ್‌ಸರ್ಕಾರದ ವಿರುದ್ಧ ಸುಮಾರು 20,000ಕ್ಕೂ ಹೆಚ್ಚು ಕಬ್ಬು, ಮೆಕ್ಕೆ ಜೋಳ, ಹತ್ತಿ, ತೊಗರಿ ಬೆಳೆಗಾರ ರೈತರೊಂದಿಗೆ ಬೆಳಗಾವಿಯ ಯಡಿಯೂರಪ್ಪ ಮಾರ್ಗದ ಮಾಲಿನಿ ಸಿಟಿಯಲ್ಲಿ ಪ್ರತಿಭಟನೆ ನಡೆಸಿ ನಂತರ ಬೃಹತ್ ರ‍್ಯಾಲಿಯೊಂದಿಗೆ ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಯಿತು.
ರೈತರ ಸಂರಕ್ಷಣೆ ನಮ್ಮ ಬದ್ಧತೆ, ರೈತರ ಹಿತ ಕಾಯಲು, ಭಾರತೀಯ ಜನತಾ ಪಾರ್ಟಿ ಎಲ್ಲ ಹೋರಾಟಕ್ಕೂ ಸಿದ್ದ! ಕಾಂಗ್ರೆಸ್ಸಿನ ರೈತ ವಿರೋಧಿ ನೀತಿಗಳಿಂದಾಗಿ ನಮ್ಮ ಅನ್ನದಾತರು ಬೀದಿಗೆ ಬರುವಂತಾಗಿದೆ. ಜನವಿರೋಧಿ, ರೈತವಿರೋಧಿ, ಭ್ರಷ್ಟ ಕಾಂಗ್ರೆಸ್‌ಸರ್ಕಾರದ ದುರಾಡಳಿತ ಮತ್ತು ವೈಫಲ್ಯಗಳ ವಿರುದ್ಧ ಇಂದು ಬೆಳಗಾವಿಯಲ್ಲಿ, ಸಹಸ್ರ ರೈತರೊಂದಿಗೆ ಸುವರ್ಣಸೌಧ ಮುತ್ತಿಗೆ ಮೂಲಕ, ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ, ನಮ್ಮ ರೈತರ ಹಿತಕಾಯಲೇಬೇಕೆಂಬ ಹಕ್ಕೊತ್ತಾಯ ಮಂಡಿಸಲಾಯಿತು.
ಈ ಸಂದರ್ಭದಲ್ಲಿ ರೈತಪರ ಕಾಳಜಿ ಪ್ರದರ್ಶಿಸದೆ, ಕಾಂಗ್ರೆಸ್ ಸರ್ಕಾರ ಪ್ರತಿಭಟನಾ ನಿರತರನ್ನು ಬಂಧಿಸುವ, ನಮ್ಮ ಧ್ವನಿ ಕುಗ್ಗಿಸುವ ದರ್ಪ ಮೆರೆದಿದೆ.

ದುರಾಡಳಿತ, ಭ್ರಷ್ಟಾಚಾರ, ಜನವಿರೋಧಿ ನೀತಿ, ರೈತವಿರೋಧಿ ನಿಲುವುಗಳನ್ನು ಮುಂದುವರಿಸಿರುವ ಕರ್ನಾಟಕ ಸರ್ಕಾರಕ್ಕೆ ಧಿಕ್ಕಾರ!! ರೈತರ ಹಿತರಕ್ಷಣೆ ನಿಟ್ಟಿನಲ್ಲಿ, ನಮ್ಮ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ ಎಂದು ಹೋರಾಟಗಾರರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು, ಮಾಜಿ ಶಾಸಕರು, ರಾಜ್ಯದ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ಪ್ರಮುಖರು, ರೈತರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

