ಬಳ್ಳಾರಿಯನ್ನು ಕಾಂಗ್ರೆಸ್‌ ರಿಪಬ್ಲಿಕ್‌ ಮಾಡಿಕೊಂಡು ಗನ್‌ ಸಂಸ್ಕೃತಿ ಹುಟ್ಟು ಹಾಕಿಸಿದ ಕೀರ್ತಿ ಸಿಎಂಗೆ ಸಲ್ಲುತ್ತದೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಂದು ತೋಳು ತಟ್ಟಿ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದ ಸಿದ್ದರಾಮಯ್ಯ
, ಇಂದು ಅದೇ ಬಳ್ಳಾರಿಯನ್ನು “ಕಾಂಗ್ರೆಸ್‌ರಿಪಬ್ಲಿಕ್‌” ಮಾಡಿಕೊಂಡು “ಗನ್‌ಸಂಸ್ಕೃತಿ” ಯನ್ನು ಹುಟ್ಟುಹಾಕಿಸಿದ್ದಾರೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.

ಸಿಎಂ ಸಿದ್ದರಾಮಯ್ಯ ಅವರೇ, ಕರ್ನಾಟಕ ಕಾಂಗ್ರೆಸ್ ಶಾಸಕರ ” ಗನ್‌ಗೂಂಡಾಗಿರಿ” ಬಗ್ಗೆ ತುಟಿ ಬಿಚ್ಚುತ್ತಿಲ್ಲ ಯಾಕೆ ? ಎಂದು ಜೆಡಿಎಸ್ ಪ್ರಶ್ನಿಸಿದೆ.

- Advertisement - 

ಶಾಸಕ ಭರತ್‌ರೆಡ್ಡಿ ರೌಡಿಯಂತೆ ಅವರನ್ನು ಮುಗಿಸುತ್ತೇನೆ, ಅವರ ಮನೆ ಸುಡುತ್ತೇನೆ ಎಂದು ಸಾರ್ವಜನಿಕವಾಗಿ ಧಮ್ಕಿ ಹಾಕಿ ಬೆದರಿಕೆ ಒಡ್ಡುತ್ತಾರೆ. ಆದರೂ ಅವರನ್ನು ಬಂಧಿಸಿಲ್ಲ ಯಾಕೆ ? ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರನ್ನ ಜೆಡಿಎಸ್ ಪ್ರಶ್ನಿಸಿದೆ.

ಸ್ವಪಕ್ಷದವರಾದರೇ ಯಾವುದೇ ಬಂಧನವಿಲ್ಲ, ಕಾನೂನು ಕ್ರಮ ಕೈಗೊಳ್ಳುವುದಿಲ್ಲ. ಅದೇ ವಿರೋಧ ಪಕ್ಷಗಳ ಶಾಸಕರು, ನಾಯಕರು ಧ್ವನಿ ಎತ್ತಿದ್ದರೇ ಅವರ ಮೇಲೆ ತಕ್ಷಣವೇ ಕ್ರಮ ಜರುಗಿಸುತ್ತೀರಿ. ಇದು ಯಾವ ಅರಣ್ಯ ನ್ಯಾಯ ? ಎಂದು ಜೆಡಿಎಸ್ ಟೀಕಿಸಿದೆ.

- Advertisement - 

 

 

Share This Article
error: Content is protected !!
";