ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಯಬೇಕಾದರೆ ಮತದಾನದ ಪರಿಕಲ್ಪನೆ ಅತ್ಯವಶ್ಯಕ. ಚುನಾವಣೆಯಲ್ಲಿ ಉತ್ತಮರನ್ನು ಆಯ್ಕೆ ಮಾಡಿದರೆ ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಆಡಳಿತ ನಿರೀಕ್ಷಿಬಹುದು ಎಂದು ಚಿಕ್ಕಗೊಂಡನಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ದಿನೇಶ್‌ರೆಡ್ಡಿ ತಿಳಿಸಿದರು.
ಶನಿವಾರ ಶಾಲೆಯಲ್ಲಿ ನಡೆದ ಶಾಲಾ ಸಂಸತ್ ಚುನಾವಣೆಯನ್ನುದ್ದೇಶಿಸಿ ಮಾತನಾಡಿದರು.
ಶಾಲಾ ಸಂಸತ್ ಚುನಾವಣೆ ಪ್ರಕ್ರಿಯೆ ಬಗ್ಗೆ ಚಿಕ್ಕಂದಿನಿಂದಲೆ ಮಕ್ಕಳಲ್ಲಿ ಜಾಗೃತಿ ಮೂಡಿಸಿದರೆ ಮತದಾನದ ಹಕ್ಕು ಸಿಕ್ಕಾಗ ನ್ಯಾಯ ಸಮ್ಮತ ಹಾಗೂ ನಿರ್ಭಯವಾಗಿ ಮಕ್ಕಳು ಚುನಾವಣೆಯಲ್ಲಿ ಮತ ಚಲಾಯಿಸಬಹುದು ಎಂದರು.
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಮಂತ್ರಿಯನ್ನು ಆಯ್ಕೆ ಮಾಡಲಾಯಿತು. ಎಸ್.ಡಿ.ಎಂ.ಸಿ. ಅಧ್ಯಕ್ಷ ದಿನೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ್, ಸದಸ್ಯ ಪ್ರಕಾಶ್, ಶಿಕ್ಷಕರುಗಳಾದ ಎಚ್.ರುದ್ರಪ್ಪ, ಸುದರ್ಶನ್, ಕೆ.ರೇವಣ್ಣ, ವಿಜಯಲಕ್ಷ್ಮಿ
ಸುವರ್ಣಮ್ಮ, ಕುಸುಮ, ರೀಟಾಮಣಿ, ವೀಣಾ, ಸಿದ್ದಮ್ಮ, ತ್ರಿವೇಣಿ, ಅರುಣ್‌ಕುಮಾರ್, ಅಣ್ಣಪ್ಪಸ್ವಾಮಿ, ಬಸವರಾಜ್ ಇವರುಗಳು ಚುನಾವಣೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.