ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭ್ರಷ್ಟಾಚಾರ ಮತ್ತು ಅಧಿಕಾರದ ಕಿತ್ತಾಟದಲ್ಲಿ ಮುಳುಗಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ, ರೈತರ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಬಲಿ ಕೊಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟೀಕಿಸಿದ್ದ್ರಾ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಬೆಳೆಹಾನಿ ಸಮೀಕ್ಷೆ ನಡೆಸಿ, ನಮ್ಮ ಅನ್ನದಾತರ ಪ್ರತಿ ಹೆಕ್ಟೇರ್‌ಗೆ ತಾವೇ ಘೋಷಿಸಿದ್ದ ಪರಿಹಾರ 17,000 ರೂ., ಆದರೆ ರೈತರ ಖಾತೆಗೆ ಜಮೆ ಮಾಡಿದ್ದು ಕೇವಲ 6,800 ರೂ.! ಬೆಳೆಹಾನಿಯ ಪ್ರಮಾಣ ಕಡಿಮೆ ತೋರಿಸಿ, ರೈತರನ್ನು ಯಾಕೆ ವಂಚಿಸುತ್ತಿದ್ದೀರಿ?
ರೈತರಿಗೆ ಪೂರ್ಣ ಪರಿಹಾರ ಯಾಕೆ ನೀಡುತ್ತಿಲ್ಲ? ರೈತರು ಕಣ್ಣೀರಿಡುವಂತೆ ಮಾಡಿದ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಉಳಿಗಾಲವಿಲ್ಲ! ಎಂದು ಅವರು ಎಚ್ಚರಿಸಿದ್ದಾರೆ.
ರೈತರಿಗೆ ದ್ರೋಹ ಎಸಗುತ್ತಿರುವ ಮುಖ್ಯಮಂತ್ರಿಗಳ ವಿರುದ್ಧ, ನಿಮ್ಮ ‘ದ್ರೋಹದ ಗ್ಯಾರಂಟಿ‘ ಸರ್ಕಾರದ ವಿರುದ್ಧ ನಾವು ಸದನದ ಒಳಗೆ ಮತ್ತು ಹೊರಗೆ ಬೃಹತ್ ಹೋರಾಟ ನಡೆಸುವುದು ನಿಶ್ಚಿತ ಎಂದು ವಿಜಯೇಂದ್ರ ಎಚ್ಚರಿಸಿದ್ದಾರೆ.

