ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಕರ್ನಾಟಕ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿಲ್ಲ, ಸಾಕಷ್ಟು ದುಡ್ಡಿದೆ ಎಂದು ಕೊಚ್ಚಿಕೊಳ್ಳುವ ಸಿದ್ದರಾಮಯ್ಯ & ಡಿ.ಕೆ ಶಿವಕುಮಾರ್ ಅವರೇ, ನ್ಯಾಯಬೆಲೆ ಅಂಗಡಿಗಳಿಗೆ ಅನ್ನಭಾಗ್ಯ ಅಕ್ಕಿ ಸಾಗಣೆ ಮಾಡಿದ್ದ ಲಾರಿ ಮಾಲೀಕರಿಗೆ ಕಳೆದ 6 ತಿಂಗಳಿಂದ ಬಾಕಿ ಹಣ ಪಾವತಿಸಿಲ್ಲ ಯಾಕೆ ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.
₹260 ಕೋಟಿ ಕೊಡಲು ಸತಾಯಿಸುತ್ತಿರುವುದು ಏಕೆ ? ಮಾತು ತಪ್ಪಿರುವ ಸರ್ಕಾರದ ವಿರುದ್ಧ ಬೇಸತ್ತಿರುವ ಲಾರಿ ಮಾಲೀಕರ ಸಂಘ ಇಂದಿನಿಂದ ರಾಜ್ಯವ್ಯಾಪಿ ಲಾರಿ ಮುಷ್ಕರ ನಡೆಸುತ್ತಿದೆ. ಇದು ಸಿದ್ದರಾಮಯ್ಯನ ದಿವಾಳಿತನಕ್ಕೆ ಸಾಕ್ಷಿ !
ಗ್ಯಾರಂಟಿಗಳನ್ನು ಪೂರೈಸಲು ಹೆಣಗಾಡುತ್ತಿರುವ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯಕ್ಕೂ ಕತ್ತರಿ ಹಾಕುತ್ತಿದೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.