ಮಾದಿಗರಿಗೆ ನೈಜ ಸ್ವತಂತ್ರ್ಯ ಲಭಿಸಲು ಕಾಂಗ್ರೆಸ್ ಸರ್ಕಾರ, ಸಿದ್ದು ಕಾರಣ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗ ನಗರದ ಒನಕೆ ಓಬವ್ವ ವೃತ್ತದಲ್ಲಿ  ಆಯೋಜಿಸಿದ್ದ  ಕರ್ನಾಟಕ ರಾಜ್ಯ ಮಾದಿಗ ಸಮಾಜದ ಅಗ್ರಗಣ್ಯ ನಾಯಕ ಹೆಚ್. ಆಂಜನೇಯ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಮಾದಿಗರ ವಿಜಯೋತ್ಸವ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಣಾಳಿಕೆ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸಚಿವರಾದ ಕೆ. ಎಚ್. ಮುನಿಯಪ್ಪ, ಡಾ. ಎಚ್ ಸಿ ಮಹದೇವಪ್ಪ ಈ ಎಲ್ಲಾ ಸಚಿವರುಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು ಎಂದು ಬಾಬು ಜಗಜೀವಾನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ತಿಳಿಸಿದ್ದಾರೆ.

ಒಳಮೀಸಲಾತಿ ಹೋರಾಟ ಸುಧೀರ್ಘ 35 ವರ್ಷ ಹಾದಿ ಸವಿಸಿದೆ. ಸಹಸ್ರಾರು ಮಂದಿ ಮನೆ ತೊರೆದು ಚಳವಳಿ ನಡೆಸಿದ್ದಾರೆ. ಅನೇಕರು ಜೀವತೆತ್ತಿದ್ದಾರೆ. ಎಲ್ಲ ಪಕ್ಷಗಳ ಮುಖಂಡರು, ಇತರೆ ಸಮುದಾಯದವರು ಮಾದಿಗರ ಕುರಿತು ಮಮತೆ ತೋರಿದ್ದಾರೆ. ಪರಿಣಾಮ ಆಗಸ್ಟ್ 19ರಂದು ಮಾದಿಗರಿಗೆ ನೈಜ ಸ್ವತಂತ್ರವನ್ನು ಮುಖ್ಯಮಂತ್ರಿ  ಸಿದ್ದರಾಮಯ್ಯ ನೀಡಿದ್ದಾರೆ ಎಂದು ಶಂಕರ್ ತಿಳಿಸಿದ್ದಾರೆ.

- Advertisement - 

 ಬಸವ ಅನುಯಾಯಿಗಳಾದ ನಾವು ಶಾಂತಿ-ಸೌಹಾರ್ದತೆಯಿಂದ 35 ವರ್ಷ ಎಲ್ಲ ರೀತಿ ಹೋರಾಟ ನಡೆಸಿದ್ದೆವು. ಕಾಂಗ್ರೆಸ್, ಜೆಡಿಎಸ್‌, ಬಿಜೆಪಿ ಎಲ್ಲ ಪಕ್ಷಗಳು ಒಳಮೀಸಲಾತಿ ಪರವಿದ್ದವು . ಆದರೆ, ಅದನ್ನು ಜಾರಿಗೊಳಿಸುವ ಅವಕಾಶ ಅವರಿಗೆ ದೊರೆಯಲಿಲ್ಲ. ಆದರೆ  ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಮಾದಿಗರಿಗೆ ನ್ಯಾಯ ಕಲ್ಪಿಸುವ ಸೌಭಾಗ್ಯ ದೊರೆಯಿತು. ಅದನ್ನು ಸಮರ್ಥವಾಗಿ ನಿರ್ವಹಿಸಿದರು.

ಎಂದೂ ಮಾದಿಗರು ಪರಿಶಿಷ್ಟ ಜಾತಿಯಲ್ಲಿ ಶೇ.1ರಷ್ಟು ಮೀಸಲಾತಿ ಪಡೆಯಲು ಸಾಧ್ಯವಾಗಿಲ್ಲ. ಆದರೆ, ಈಗ ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯ ಶೇ.6ರಷ್ಟು ಮೀಸಲಾತಿ ನೀಡಿ ನಮ್ಮ ಪ್ರಗತಿಗೆ ಸಹಕರಿಸಿದ್ದಾರೆ. ಕೊಟ್ಟ ಅವಕಾಶವನ್ನು ನಾವು ಸಮರ್ಥವಾಗಿ ಸದ್ಬಳಕೆ ಮಾಡಿಕೊಂಡು ಮುಖ್ಯವಾಹಿನಿಗೆ ಬರಬೇಕು. ಉನ್ನತ ಶಿಕ್ಷಣ, ಉದ್ಯೋಗ, ಆರ್ಥಿಕ ನೆರವು ಪಡದು ಅಭಿವೃದ್ಧಿ ಸಾಧಿಸಬೇಕೆಂದು ಓ.ಶಂಕರ್ ತಿಳಿಸಿದರು.

- Advertisement - 

 ಯಾರೇ ಅನುಕೂಲ ಮಾಡಿದರೂ ಅದಕ್ಕೆ ಪ್ರತಿಯಾಗಿ ಕೃತಜ್ಞತೆ ಸಲ್ಲಿಸುವ ಹುಟ್ಟುಗುಣ ಮಾದಿಗರದ್ದಾಗಿದೆ. ಈ ಕಾರಣಕ್ಕೆ ಅನೇಕ ಅಡೆತಡೆಗಳ ಮಧ್ಯೆ ಮೊದಲಿನಿಂದಲೂ ಭರವಸೆ ನೀಡಿದಂತೆ ಶೇ.6 ಮೀಸಲಾತಿ ಸಿದ್ದರಾಮಯ್ಯ ನೀಡಿದ್ದಾರೆ. ಅವರಿಗೆ ಸಮಾಜ ಸದಾ ಕೃತಜ್ಞರಾಗಿರುತ್ತದೆ. ಇನ್ನಷ್ಟು ಬೇಡಿಕೆಗಳಿದ್ದು ಅವುಗಳನ್ನು ಈಡೇರಿಸಿಕೊಳ್ಳುವತ್ತ ಒಗ್ಗಟ್ಟಿನಿಂದ ಹೆಜ್ಜೆ ಹಾಕಬೇಕಿದೆ ಎಂದು ಶಂಕರ್ ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಕೇಂದ್ರ ಬಿಂದು ಹೆಚ್. ಆಂಜನೇಯ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಮಾಜಿ ಸಂಸದ ಬಿಎನ್.ಚಂದ್ರಪ್ಪ, ಡಾ. ಬಿ. ತಿಪ್ಪೇಸ್ವಾಮಿ, ಆದಿಜಾಂಬವ ನಿಗಮ ಮಂಡಳಿ ಅಧ್ಯಕ್ಷ  ಜಿ.ಎಸ್ ಮಂಜುನಾಥ್  ಮತ್ತು ಡಾ. ಬಾಬು ಜಗಜೀವಾನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಓ. ಶಂಕರ್ ಸೇರಿದಂತೆ ಜಿಲ್ಲೆಯ ಸಮಾಜದ ಹಿರಿಯ, ಕಿರಿಯ  ಮುಖಂಡರು, ಹೋರಾಟಗಾರರು, ಅನೇಕ ಸಂಘಟನೆಯ ಮುಖಂಡರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

 

 

 

Share This Article
error: Content is protected !!
";