ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಸರ್ಕಾರ ಕಳೆದ ಒಂದೂವರೆ ವರ್ಷದಲ್ಲಿ ಕರೆಕ್ಟಾಗಿ ಕೊಟ್ಟಿರೋ ಒಂದೇ ಒಂದು ಗ್ಯಾರೆಂಟಿ ಅಂದರೆ ಅದು ಬೆಲೆ ಏರಿಕೆ ಗ್ಯಾರೆಂಟಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಹಾಲು, ಪೆಟ್ರೋಲ್, ಡೀಸೆಲ್, ಕರೆಂಟು, ಬಸ್ ಚಾರ್ಜು ಸೇರಿದಂತೆ ಬಡವರು, ಮಧ್ಯಮ ವರ್ಗ ಜನಸಾಮಾನ್ಯರು ದಿನನಿತ್ಯ ಬಳಸುವ ಎಲ್ಲಾ ಅಗತ್ಯ ವಸ್ತುಗಳು, ಸೇವೆಗಳ ದರವನ್ನ ಹೆಚ್ಚಿಸಿದೆ ಈ ನಾಡದ್ರೋಹಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಎಂದು ಅವರು ವಾಗ್ದಾಳಿ ಮಾಡಿದ್ದಾರೆ.