ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಮಹದೇವಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 7 ಸಾವಿರ ಕೋಟಿ ಮೌಲ್ಯದ ದಲಿತರ ಭೂಮಿ ಕಬಳಿಸಲು ಸಿದ್ದರಾಮಯ್ಯ ಸರ್ಕಾರ ಯತ್ನಿಸುತ್ತಿರುವುದು ಖಂಡನೀಯ ಎಂದು ಬಿಜೆಪಿ ಕಿಡಿಕಾರಿದೆ.
ಅಹಿಂದ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ದಲಿತರನ್ನು ತುಳಿಯುವ ಕೆಲಸಕ್ಕೆ ಕಾಂಗ್ರೆಸ್ ಸರ್ಕಾರ ಇಳಿದಿರುವುದು ದುರಂತ. ದಲಿತರ ಹಕ್ಕುಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ದಲಿತರ ಶ್ರೇಯೋಭಿವೃದ್ಧಿಯನ್ನು ಮರೆತೇ ಬಿಟ್ಟಿದೆ. ದಲಿತರನ್ನು ನೆಮ್ಮದಿಯಲ್ಲಿರಲು ಬಿಡಲಾರೆವು ಎಂದು ಹಠ ತೊಟ್ಟಂತೆ ವರ್ತಿಸುತ್ತಿರುವುದು ಖೇದಕರ.
ದಲಿತರು ಏನು ಅನ್ಯಾಯ ಮಾಡಿದ್ದಾರೆಂದು ಈ ಪರಿಯಾಗಿ ಕಾಂಗ್ರೆಸ್ ಸರ್ಕಾರ ಅವಮಾಮಾನಿಸುತ್ತಿದೆ? ಎಂದು ಬಿಜೆಪಿ ತೀಕ್ಷ್ಣವಾಗಿ ಪ್ರಶ್ನಿಸಿದೆ.

