ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾರಿಗೆ ನಿಗಮಗಳಿಗೆ ಅನುದಾನ ನೀಡದೆ ಬರ್ಬಾದ್‌ಮಾಡಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಪ್ರಯಾಣಿಕರ ಟಿಕೆಟ್‌ದರ ಏರಿಸುವ ಮೂಲಕ ಬಡವರ ಹೊಟ್ಟೆ ಮೇಲೆ ಹೊಡೆದಿದೆ ಎಂದು ಬಿಜೆಪಿ ಟೀಕಾಪ್ರಹಾರ ಮಾಡಿದೆ.
ಇದೀಗ ಹಣ ಉಳಿತಾಯ ಮಾಡಲು ಪ್ರಯಾಣಿಕರು ಪಡೆಯುತ್ತಿದ್ದ ದೈನಿಕ, ಸಾಪ್ತಾಹಿಕ, ಮಾಸಿಕ ಪಾಸ್‌ದರವನ್ನೂ ಏರಿಕೆ ಮಾಡಿ ಸಂಪೂರ್ಣವಾಗಿಯೇ ಲೂಟಿ ಮಾಡುವುದಾಗಿ ಸಾರಿಗೆ ಸಚಿವ ಆರ್.ರಾಮಲಿಂಗರೆಡ್ಡಿ ಅವರು ತೋರಿಸಿಕೊಟ್ಟಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಪ್ರಯಾಣಿಕರ ಪಾಸ್‌ದರವನ್ನು 10 ರೂ.ನಿಂದ 150 ರೂಪಾಯಿವರೆಗೂ ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ಹೆಚ್ಚಳ ಮಾಡುವ ಮೂಲಕ ಕರ್ನಾಟಕವನ್ನು ಸರ್ವತೋಮುಖವಾಗಿ ಲೂಟಿ ಮಾಡುತ್ತಿದೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.