ಕಾಂಗ್ರೆಸ್ ಸರ್ಕಾರವು ಕಮಿಷನ್ ಆರೋಪದ ವಿಚಾರದಲ್ಲಿ ದ್ವಂದ್ವ ಧೋರಣೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಕಾಂಗ್ರೆಸ್ ಸರ್ಕಾರವು ಕಮಿಷನ್ ಆರೋಪದ ವಿಚಾರದಲ್ಲಿ ದ್ವಂದ್ವ ಧೋರಣೆ ಅನುಸರಿಸುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಟೀಕಿಸಿದರು.

ವಿಧಾನಸೌಧದಲ್ಲಿ ಬುಧವಾರ ಮಾತನಾಡಿದ ಅವರು, ಹಿಂದಿನ ಸರ್ಕಾರದ ಆರೋಪಗಳಿಗೆ ಸಾಕ್ಷಿ ಕೇಳದವರು ಈಗ ಏಕೆ ಕೇಳುತ್ತಿದ್ದಾರೆ ಎಂದು ಪ್ರಶ್ನಿಸಿದರು. ಸರ್ಕಾರದ ಮೇಲೆ ಗುತ್ತಿಗೆದಾರರ ಸಂಘ ಮಾಡಿರುವ 80% ಕಮಿಷನ್ ಆರೋಪ ಗಂಭೀರ ವಿಷಯವಾಗಿದ್ದು, ಅದು ಸುಳ್ಳು ಎಂದು ಹೇಳುವ ಕಾಂಗ್ರೆಸ್ ನಾಯಕರು ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿ ಎಂದು ಅಶೋಕ್ ಸವಾಲು ಹಾಕಿದರು.

- Advertisement - 

ನಾವು ಸತ್ಯಹರಿಶ್ಚಂದ್ರನ ಮಕ್ಕಳು ಎಂದು ಹೇಳಿಕೊಳ್ಳುವ ಸಚಿವರು ಮೊದಲು ಈ ಆರೋಪಗಳಿಗೆ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯದ ಟೆಂಡರ್‌ಗಳು ನೆರೆಯ ಆಂಧ್ರಪ್ರದೇಶದ ಗುತ್ತಿಗೆದಾರರಿಗೆ ಹೋಗುತ್ತಿವೆ ಎಂದು ಆರೋಪಿಸಿದ ಅವರು
, ಕೆಕೆಆರ್‌ಡಿಬಿ ಕಾಮಗಾರಿಗಳನ್ನು ಸ್ಥಳೀಯ ಗುತ್ತಿಗೆದಾರರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಎಷ್ಟು ಕಮಿಷನ್?-ಅಶೋಕ್
ಕಸದ ಟೆಂಡರ್ ಪಡೆಯಲು ಶೇ.
7 ರಷ್ಟು ಕಮಿಷನ್, ಬಿಲ್ ಬಿಡುಗಡೆಗೆ ಶೇ.7 ಹಾಗೂ ವಿಶೇಷ ಎಲ್‌ಒಸಿ ಪಡೆಯಲು ಶೇ.7 ನೀಡಬೇಕಾಗಿದೆ.

- Advertisement - 

ಇದರಿಂದ ಒಟ್ಟಾರೆ ಶೇ.21 ರಷ್ಟು ಕಮಿಷನ್ ಹೋಗುತ್ತಿದೆ ಎಂದು ಅಶೋಕ್ ಗಂಭೀರ ಆರೋಪ ಮಾಡಿದರು.
ಇಷ್ಟೇ ಅಲ್ಲದೆ ಇಂಜಿನಿಯರ್‌ಗಳಿಗೆ ಬೇರೆ ಕಮೀಷನ್ ನೀಡಬೇಕಾಗುತ್ತಿದೆ
, ಕಸದ ಸಮಸ್ಯೆಗೆ ಸರ್ಕಾರದ ಮಾಫಿಯಾವೇ ಕಾರಣ ಎಂದು ಅಶೋಕ್ ವಾಗ್ದಾಳಿ ನಡೆಸಿದರು.
ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ಕ್ರಮವನ್ನು ಖಂಡಿಸಿದ ಅವರು
, ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ-ಜೆಡಿಎಸ್ ಹೊಂದಾಣಿಕೆ?
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನುವಾಣೆ ಸೇರಿದಂತೆ ಜಿಬಿಎ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ವಿಚಾರವಾಗಿ ಮಾತನಾಡಿದ ಅಶೋಕ್, ಕೇಂದ್ರ ಸಚಿವ ಹೆಚ್.​ಡಿ ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆದಿದ್ದು, ಮೈತ್ರಿ ಸುಗಮವಾಗಿ ಚುನಾವಣೆ ಎದುರಿಸಲಿದೆ ಎಂದು ತಿಳಿಸಿದರು. ಸಣ್ಣಪುಟ್ಟ ಗೊಂದಲಗಳನ್ನು ಬೇಗನೆ ಬಗೆಹರಿಸಲಾಗುವುದು, ಅಂತಿಮ ತೀರ್ಮಾನ ಹೈಕಮಾಂಡ್‌ ಮಾಡಲಿದೆ ಎಂದು ಅಶೋಕ್ ಹೇಳಿದರು.

 

 

 

Share This Article
error: Content is protected !!
";