ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಕರ್ನಾಟಕ ಕಾಂಗ್ರೆಸ್ ಸರ್ಕಾರ ಬೆಲೆ ಏರಿಸಿ, ಕರ್ನಾಟಕದ ಜನರನ್ನು ನಿರಂತರವಾಗಿ ದರೋಡೆ ಮಾಡುತ್ತಿದೆ, ಮತ್ತೊಂದು ಕಡೆ ಕಾನೂನಿನ ಭಯವಿಲ್ಲದೇ ದರೋಡೆಕೋರರು ಹಗಲು ಹೊತ್ತಿನಲ್ಲೇ ಬ್ಯಾಂಕ್‌ಗಳು, ಎಟಿಎಂ ವಾಹನಗಳನ್ನು ರಾಬರಿ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಗಂಭೀಪ ಆರೋಪ ಮಾಡಿದೆ.
ಅಕ್ಟೋಬರ್ 2024 : ದಾವಣಗೆರೆಯ ನ್ಯಾಮತಿಯಲ್ಲಿ SBI ಬ್ಯಾಂಕ್ ದರೋಡೆ. ಜನವರಿ 2025 : ಬೀದರ್‌ನಲ್ಲಿ ಎಟಿಎಂಗೆ ಹಣ ಸಾಗಿಸುವ ವಾಹನ ದರೋಡೆ. ಜನವರಿ 2025 : ಮಂಗಳೂರಿನ ಕೋಟೆಕಾರು ಸಹಕಾರಿ ಬ್ಯಾಂಕ್‌ದರೋಡೆ.
ಏಪ್ರಿಲ್2025 : ಕಲಬುರಗಿಯಲ್ಲಿ ಎಟಿಎಂ ಯಂತ್ರ ಧ್ವಂಸಗೊಳಿಸಿ ದರೋಡೆ.
ಮೇ 2025 : ವಿಜಯಪುರದ ಮನಗೂಳಿಯಲ್ಲಿ ಕೆನರಾ ಬ್ಯಾಂಕ್ ದರೋಡೆ. ಸೆಪ್ಟೆಂಬರ್ 2025 : ವಿಜಯಪುರದ ಚಡಚಣದಲ್ಲಿ SBI ಬ್ಯಾಂಕ್ ದರೋಡೆ
19, ನವೆಂಬರ್2025 : ಬೆಂಗಳೂರಿನ ಡೈರಿ ಸರ್ಕಲ್‌ಮೇಲ್ಸೇತುವೆ ಬಳಿ ಎಟಿಎಂಗೆ ಹಣ ತುಂಬುವ ವಾಹನ ದರೋಡೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ ನಿಷ್ಪ್ರಯೋಜಕ ಎಂಬುದಕ್ಕೆ ಇದಕ್ಕಿಂತ ನಿದರ್ಶನ ಬೇರೆ ಬೇಕಿಲ್ಲ. ಸಿದ್ದರಾಮಯ್ಯ ಅವರ ಅರಾಜಕತೆಯಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ದರೋಡೆಕೋರರು, ಕಳ್ಳಕಾಕರ ಅಟ್ಟಹಾಸ ಮಿತಿಮೀರಿದೆ ಎಂದು ಜೆಡಿಎಸ್ ಟೀಕಿಸಿದೆ.

