ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್‌ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಬೆಲೆ ಏರಿಕೆಯೇ ಮಾಧ್ಯಮದಲ್ಲಿ ದಿನನಿತ್ಯ ಬ್ರೇಕಿಂಗ್ ನ್ಯೂಸ್ ಆಗಿದೆ. ಬಸ್ ಟಿಕೆಟ್ ದರದ ಹೆಚ್ಚಳದ ಬೆನ್ನಲ್ಲೇ ಮೆಟ್ರೋ ಟಿಕೆಟ್ ದರ ಶೇ. 40 ರಷ್ಟು ಹೆಚ್ಚಳ ಮಾಡಲು ಮುಂದಾಗಿದೆ ರಾಜ್ಯ ಕಾಂಗ್ರೆಸ್ ಸರ್ಕಾರ ಎಂದು ಬಿಜೆಪಿ ದೂರಿದೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಯಾವುದೂ ಜನಸಾಮಾನ್ಯರಿಗೆ ಕೈಗೆಟಕುತ್ತಿಲ್ಲ. ಕಾಂಗ್ರೆಸ್‌ಬೆಲೆ ಏರಿಸಿ ತನ್ನ ಖಜಾನೆ ತುಂಬಿಸಿಕೊಳ್ಳುತ್ತಿದೆ. ಜನ ಸಾಮಾನ್ಯರ ಓಡಾಟಕ್ಕೆ ಆಸರೆಯಾಗಿದ್ದ ಮೆಟ್ರೋ ಟಿಕೆಟ್ ದರ ಕೂಡ ದುಬಾರಿ ಮಾಡಲು ಮುಂದಾಗಿದ್ದು ಖಂಡನೀಯ.
ಬೆಂಗಳೂರಿಗೆ ಬದುಕು ಕಟ್ಟಿಕೊಳ್ಳಲು ಬಂದಿರುವ ಜನಸಾಮಾನ್ಯರು ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆಯ ವಿರುದ್ಧ ಮುಂದಿನ ದಿನಗಳಲ್ಲಿ ಬೀದಿಗಿಳಿಯುವುದು ನಿಶ್ಚಿತ ಎಂದು ಬಿಜೆಪಿ ಎಚ್ಚರಿಸಿದೆ.

