ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರುನಾಡಿನ ಶಾಂತಿಗೆ ಕೊಳ್ಳಿಯಿಟ್ಟಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಜೈಲಿನಲ್ಲಿರುವ ರೌಡಿಗಳಿಗೆ, ಕೊಲೆಗಡುಕರಿಗೆ, ಸಮಾಜಘಾತುಕರಿಗೆ ರಾಜಾತಿಥ್ಯ ನೀಡುತ್ತಿದೆ! ಎಂದು ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ ಗಂಭೀರ ಆರೋಪ ಮಾಡಿದೆ.
ಕಲಬುರಗಿ ಜೈಲಿನಲ್ಲಿರುವ ಕೈದಿಗಳಿಗೆ ಮದ್ಯ, ಗಾಂಜಾ, ಮೊಬೈಲ್‌ನೊಂದಿಗೆ ರಾಜಾತಿಥ್ಯದ ತಾಂಬೂಲ ಸಿಗುತ್ತಿದ್ದರೂ ಅಸಮರ್ಥ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಗಾಢನಿದ್ರೆಗೆ ಜಾರಿಬಿಟ್ಟಿದ್ದಾರೆ.
ಎ1 ಆರೋಪಿ ಭ್ರಷ್ಟ ಸಿದ್ದರಾಮಯ್ಯನವರೇ, ತಮ್ಮ ಬ್ರಹ್ಮಾಂಡ ಭ್ರಷ್ಟಾಚಾರದಿಂದ ಕರ್ನಾಟಕದ ಗೌರವ ಹಾಳಾಗಿದೆ. ಹಾಗೇ ಕೈಲಾಗದ ಗೃಹ ಸಚಿವ ಪರಮೇಶ್ವರ್‌ಅವರ ವೈಫಲ್ಯದಿಂದ ಕರುನಾಡು ಅಶಾಂತಿಯ ತೋಟವಾಗಿದೆ. ನಾಡಿನ ಘನತೆ ಕಳೆದ ತಾವಿಬ್ಬರೂ ಕುರ್ಚಿ ಬಿಟ್ಟು, ಮನೆಗೆ ಹೊರಡಿ ಎಂದು ಬಿಜೆಪಿ ಆಗ್ರಹ ಮಾಡಿದೆ.