ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಖಿಲಕರ್ನಾಟಕ ಬೆಲೆ ಏರಿಕೆಯ ಸಂಘ ರಾಜ್ಯದಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಯಾಕಾದರೂ ಆಡಳಿತಕ್ಕೆ ಬಂದಿದೆಯೋ ಎಂದು ರಾಜ್ಯದ ಜನತೆ ಹಣೆ ಚಚ್ಚಿಕೊಳ್ಳುತ್ತಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ, ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಮಾಡದ ವಸ್ತುಗಳಿಲ್ಲ ಎಂಬಂತಾಗಿದೆ ಎಂದು ಬಿಜೆಪಿ ಕಿಡಿಕಾರಿದೆ.
ಹಾಲು, ನೀರು, ವಿದ್ಯುತ್, ಮದ್ಯ, ಡಿಸೇಲ್, ಮುದ್ರಾಂಕ, ಆಸ್ಪತ್ರೆ ಸೇವಾದರ, ಟ್ರಾನ್ಸ್‌ಫಾರ್ಮರ್ ಸೇರಿದಂತೆ ಅನೇಕ ವಸ್ತು ಪದಾರ್ಥ, ಸೇವಾದರಗಳ ದರ ಏರಿಕೆ ಮಾಡಿದ್ದ ಸಿದ್ದರಾಮಯ್ಯ ಸರ್ಕಾರ ಇದೀಗ ಪಠ್ಯಪುಸ್ತಕದ ಬೆಲೆಯನ್ನೂ 10% ಏರಿಸಿದೆ.
ಬೆಲೆ ಏರಿಸಿ,ಜನರನ್ನು ಲೂಟಿ ಹೊಡೆದು ಆಡಳಿತ ನಡೆಸುವುದಾದರೆ ಈ ಸರ್ಕಾರ ಇರುವುದೇಕೆ, ಯಾವುದಾದರೂ ಖಾಸಗಿ ಏಜೆನ್ಸಿಗಳಿಗೆ ಆಡಳಿತ ಒಪ್ಪಿಸಬಹುದಲ್ಲವೇ? ಎಂದು ಬಿಜೆಪಿ ವ್ಯಂಗ್ಯವಾಡಿದೆ.