ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾಗಿದ್ದು, ಭಿಕ್ಷೆ ಬೇಡುವ ದುಸ್ಥಿತಿಗೆ ಬಂದು ನಿಂತಿದೆ. ಬೊಕ್ಕಸದಲ್ಲಿ ಹಣವಿಲ್ಲದೇ ದೇವಸ್ಥಾನಗಳ ಹುಂಡಿ ಹಣಕ್ಕೆ ಕೈ ಹಾಕಿದೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಅವೈಜ್ಞಾನಿ ಗ್ಯಾರಂಟಿಗಳನ್ನು ಘೋಷಿಸಿ ಹಿಮಾಚಲದಲ್ಲಿ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಸರ್ಕಾರ ಬೆಟ್ಟದಷ್ಟು ಸಾಲ ಮಾಡಿ, ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿದ್ದು ಸಚಿವರು, ಶಾಸಕರಿಗೆ ಹಲವು ತಿಂಗಳಿಂದ ಸಂಬಳ ಕೊಡಲು ಬಿಡಿಗಾಸು ಇಲ್ಲದೇ ಪಾಪರ್ ಆಗಿದೆ ಎಂದು ಜೆಡಿಎಸ್ ದೂರಿದೆ.
ಕರ್ನಾಟಕದಲ್ಲಿಯು ಹಲವು ತಿಂಗಳಿಂದ ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆಗಳ ಹಣವನ್ನು ಫಲಾನುಭವಿಗಳಿಗೆ ಕೊಡಲು ಸಿದ್ದರಾಮಯ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ.
ಹಿಮಾಚಲ ಮಾದರಿಯಲ್ಲಿಯೇ ಕರ್ನಾಟಕದ ಕರ್ನಾಟಕ ಕಾಂಗ್ರೆಸ್ ಸರ್ಕಾರದ ದಿವಾಳಿ ಪ್ರಕ್ರಿಯೆ ಜೊತೆಯಲ್ಲಿಯೇ ಸಾಗುತ್ತಿದೆ ಎಂದು ಜೆಡಿಎಸ್ ಆರೋಪಿಸಿದ.